Home ಕೇಂದ್ರ ಸರಕಾರ ಪ್ರಧಾನಮಂತ್ರಿ ಪಿಎಂ ಕನ್ಯಾ ಯೋಜನೆ ಅರ್ಜಿ ಸಲ್ಲಿಕೆ ಮಾಡಲು ಕಾಯುತ್ತಿದ್ದೀರಾ…? ಆ ಯೋಜನೆಯ ನಿಜಾಂಶ ಇಲ್ಲಿದೆ…

ಪ್ರಧಾನಮಂತ್ರಿ ಪಿಎಂ ಕನ್ಯಾ ಯೋಜನೆ ಅರ್ಜಿ ಸಲ್ಲಿಕೆ ಮಾಡಲು ಕಾಯುತ್ತಿದ್ದೀರಾ…? ಆ ಯೋಜನೆಯ ನಿಜಾಂಶ ಇಲ್ಲಿದೆ…

ಮೊನ್ನೆಯಷ್ಟೆ ಲೋಕಸಭೆ ಚುನಾವಣೆ ಫಲಿತಾಂಶ ಬಂದಿದೆ. ಈಗಾಗಲೇ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಯಾಗಿದೆ. ಫಲಿತಾಂಶ ಬಂದ ನಂತರದಲ್ಲಿ ಎಲ್ಲರ ವಾಟ್ಸಾಪ್‌ಗಳಲ್ಲಿ ಪತ್ರಿಕೆಯ ಸುದ್ದಿಯ ಚಿತ್ರವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದರಲ್ಲಿ ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಇದ್ದರೆ ಪ್ರತಿ ತಿಂಗಳು ನಿಮಗೆ 2000 ರೂ. ಖಾತೆಗೆ ಬರಲಿದೆ. ನರೇಂದ್ರ ಮೋದಿಯವರು ಜಾರಿಗೆ ತಂದಿರುವ ಹೊಸ ಯೋಜನೆ ಇದು ಎನ್ನಲಾಗಿತ್ತು. 2023 ರಲ್ಲಿಯು ಈ ಸುದ್ದಿ ವೈರಲ್ ಆಗಿತ್ತು. ಈ ವರ್ಷ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೆಚ್ಚಿನ ಪೋಷಕರು ಈ ಸೌಲಭ್ಯ ಕ್ಕಾಗಿ ಅರ್ಜಿ ಸಲ್ಲಿಸಲು ಸೈಬರ್ ಸೆಂಟರ್ ಗೆ ಭೇಟಿ ನೀಡಿದ್ದಾರೆ. ಆದರೆ ಈ ಯೋಜನೆಯ ನಿಜಾಂಶ ಏನು? ಎನ್ನುವ ಮಾಹಿತಿ ಈ‌ ಲೇಖನದಲ್ಲಿದೆ.

ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳ ಅಭಿವೃದ್ಧಿ ಗಾಗಿ ದೇಶದ ಎಲ್ಲಾ ಹೆಣ್ಣುಮಕ್ಕಳಿಗೆ ತಿಂಗಳಿಗೆ 2000 ರೂ. ನೀಡಲಿದೆ. ಸರ್ಕಾರವು ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಿದೆ ಎನ್ನುವ ನಕಲಿ ಪೋಸ್ಟ್ ಮೇರೆಗೆ‌ ದಾಖಲೆಗಳನ್ನು ಹಿಡಿದುಕೊಂಡು ಜನರು ಸೈಬರ್ ಸೆಂಟರ್, ಸಿ ಎಸ್ ಸಿ, ಗ್ರಾಮ್ ಒನ್, ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಿದ್ದಾರೆ.‌ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ತಪ್ಪು ಸಂದೇಶದಿಂದ ಜನ ಅಲೆದಾಡುವಂತೆ ಆಗಿದೆ.

ಇದೀಗ ಈ ಪತ್ರಿಕೆಯ ಚಿತ್ರ ಸೇರಿ ಯೋಜನೆ ಹೆಸರು ಉಲ್ಲೇಖಿಸಿ ಕೇಂದ್ರ ಸರ್ಕಾರದ ಪ್ರೆಸ್ ಇನ್‌ ಫಾರ್ಮೇಶನ್ ಬ್ಯೂರೊಗೆ ಮಾಹಿತಿ ನೀಡಿ, ಅದಕ್ಕೆ ಪಿಐಬಿ ಪ್ರತಿಕ್ರಿಯೆ ಕೂಡ ನೀಡಿದೆ.‌ ಕೇಂದ್ರ ಸರ್ಕಾರದಿಂದ ಇಂತಹ ಯಾವುದೇ ಯೋಜನೆ ಇಲ್ಲ ಎಂದು ಕೂಡ ಸ್ಪಷ್ಟನೆ ‌ನೀಡಿದೆ. ಆ ಮೂಲಕ ಈ ವೈರಲ್ ಸಂದೇಶದ ಸತ್ಯವನ್ನ ಹೇಳಿದೆ. ಈ ಪೋಸ್ಟ್ ನಕಲಿ ಎಂದು ಪಿಐಬಿ ಫ್ಯಾಕ್ಟ್ ಚೆಕ್ ಹ್ಯಾಂಡಲ್ ಟ್ವೀಟ್ ಕೂಡ ಮಾಡಿದೆ.

 
Previous articleಯುಜಿಸಿ-ನೆಟ್‌ 2024 ಪರೀಕ್ಷೆ ರದ್ದುಗೊಳಿಸಿದ ಕೇಂದ್ರ ಶಿಕ್ಷಣ ಇಲಾಖೆ
Next articleವಾಹನ ಸವಾರರಿಗೆ ಗುಡ್ ನ್ಯೂಸ್: ನಂಬರ್ ಪ್ಲೇಟ್ ಅಳವಡಿಕೆಯ ಡೆಡ್‌ಲೈನ್‌ ಮತ್ತೊಮ್ಮೆ ವಿಸ್ತರಣೆ