ಇಂದು ಬಡವರ್ಗದ ಜನತೆಗೆ, ಕೂಲಿ ಕಾರ್ಮಿಕರಿಗೆ, ಕೃಷಿಕರಿಗೆ ಹೀಗೆ ಸರ್ಕಾರ ನನಾ ರೀತಿಯ ಆರ್ಥಿಕ ನೆರವನ್ನು ನೀಡುತ್ತಲೇ ಬಂದಿದೆ. ಅದೇ ರೀತಿ ಕಾರ್ಮಿಕರಿಗೆ ನೆರವಾಗಲು ಕಾರ್ಮಿಕ ಇಲಾಖೆಯು ಹೊಸ ಸೌಕರ್ಯಗಳನ್ನು ಜಾರಿಗೆ ತಂದಿದ್ದು, ಅದರಲ್ಲಿ ಕಾರ್ಮಿಕ ಕಾರ್ಡ್ ಒಂದಾಗಿದೆ. ಇದರ ಅಡಿಯಲ್ಲಿ ಯಾವೆಲ್ಲ ಸೌಲಭ್ಯ ಪಡೆಯಬಹುದು, ಯಾರೆಲ್ಲ ಪಡೆಯಬಹುದು ಎಂಬ ಮಾಹಿತಿ ಇಲ್ಲಿದೆ
ಕಾರ್ಡ್ ಮಾಡಿಸಬೇಕು
ಹೌದು, ಅರ್ಹ ಅಭ್ಯರ್ಥಿಗಳು ಲೇಬರ್ ಕಾರ್ಡ್ ಅನ್ನು ನೊಂದಣಿ ಮಾಡುವ ಮೂಲಕ ಲೇಬರ್ ಕಾರ್ಡ್ ಪಡೆದುಕೊಂಡು, ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಲೇಬರ್ ಕಾರ್ಡ್ ಪಡೆದುಕೊಳ್ಳಲು ಒಂದು ವರ್ಷದ ಕಟ್ಟಡದ ನಿರ್ಮಾಣದಲ್ಲಿ ಕನಿಷ್ಠ 90 ದಿನಗಳ ಕೆಲಸ ಮಾಡಿದ್ದ ಕಾರ್ಮಿಕರು ಮತ್ತು 18 ರಿಂದ 50 ವರ್ಷದ ಒಳಗಿನ ಕಾರ್ಮಿಕ ವರ್ಗದವರು ಅರ್ಜಿ ಸಲ್ಲಿಸಲು ಅವಕಾಶ ಇರಲಿದೆ.
ಯಾರು ಕಾರ್ಡ್ ಮಾಡಿಸಬಹುದು?
ಕಟ್ಟಡ ನಿರ್ಮಾಣ ಮಾಡುವ ಕಾರ್ಮಿಕರು ಅರ್ಜಿ ಹಾಕಬಹುದು. ರಸ್ತೆ ನಿರ್ಮಾಣ, ಕಟ್ಟಡ ಮಾರ್ಪಾಡು, ಅಗಲೀಕರಣ, ರೈಲ್ವೆಗಳು, ಏರ್ ಫೀಲ್ಡ್, ನೀರಾವರಿ ಚರಂಡಿ, ಕಟ್ಟಡ ನಿರ್ಮಾಣ ಸಿಗ್ನೇಜ್, ರಸ್ತೆ ಪೀಠೋಪಕರಣಗಳು, ಹೀಗೆ ನಾನಾ ರೀತಿಯ ಕೆಲಸ ಮಾಡೋರು ಅರ್ಜಿ ಹಾಕಬಹುದು.
ಈ ಸೌಲಭ್ಯ ಸಿಗಲಿದೆ
ಈ ಕಾರ್ಡ್ ಮೂಲಕ ಕಾರ್ಮಿಕರಿಗೆ ವೈದ್ಯಕೀಯ ವೆಚ್ಚ , ಪಿಂಚಣಿ ಸೌಲಭ್ಯ, ಹೆರಿಗೆ ಸೌಲಭ್ಯ, ಶೈಕ್ಷಣಿಕ ಸಹಾಯಧನ, ಅಂತ್ಯಕ್ರಿಯೆ ವೆಚ್ಚ, ಮದುವೆ ಸಹಾಯಧನ, ವೈದ್ಯಕೀಯ ಸಹಾಯಧನ, ಪಿಂಚಣಿ ಸೌಲಭ್ಯ, ಶ್ರಮ ಸಾಮರ್ಥ್ಯ ಟೂಲ್ ಕಿಟ್ ಹಾಗೂ ಉಚಿತ ಸಾರಿಗೆ ಬಸ್ ಪಾಸ್ ಸೌಲಭ್ಯ ಇತ್ಯಾದಿ ನೀಡಲಾಗುತ್ತದೆ
ಈ ದಾಖಲೆ ಬೇಕು
ಆಧಾರ್ ಕಾರ್ಡ್
ಬ್ಯಾಂಕ್ ಖಾತೆ ಸಂಖ್ಯೆ
ಕುಟುಂಬದ ಸದಸ್ಯರ ಆಧಾರ್ ಫೋಟೊ
ಪಡಿತರ ಚೀಟಿ ಇತ್ಯಾದಿ
ಅರ್ಜಿ ಹಾಕಲುhttps:// karbwwb.karnataka.gov.in/ ಈ ವೆಬ್ಸೈಟ್ ಗೆ ಭೇಟಿ ನೀಡಿ.
