Home ಕೇಂದ್ರ ಸರಕಾರ ಸ್ವಂತ ಮನೆ ನಿರ್ಮಾಣ ‌ಮಾಡಲು ಸರ್ಕಾರದಿಂದ ಸಿಗಲಿದೆ ಕಡಿಮೆ ಬಡ್ಡಿಯ ಸಾಲ ಸೌಲಭ್ಯ?

ಸ್ವಂತ ಮನೆ ನಿರ್ಮಾಣ ‌ಮಾಡಲು ಸರ್ಕಾರದಿಂದ ಸಿಗಲಿದೆ ಕಡಿಮೆ ಬಡ್ಡಿಯ ಸಾಲ ಸೌಲಭ್ಯ?

ಇಂದು ಸ್ವಂತ ಮನೆ ನಿರ್ಮಾಣ ಮಾಡುವ ಕನಸು ಪ್ರತಿಯೊಬ್ಬ ವ್ಯಕ್ತಿಯದ್ದು ಆಗಿದ್ದು, ಆದರೆ ಸುಲಭವಾಗಿ ಮನೆ ನಿರ್ಮಾಣ ಮಾಡಲು ಸಾಧ್ಯ ಇಲ್ಲ. ಅದಕ್ಕಾಗಿ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಗ್ರಾಮೀಣ ವರ್ಗದ ಬಡ ಜನತೆಗೆ ಮತ್ತು ಸಮಾಜದ ದುರ್ಬಲ ವರ್ಗದವರಿಗೆ ಈ ಸೌಲಭ್ಯ ಜಾರಿ ಮಾಡಿದೆ. ಹೌದು ಅದುವೇ ಗ್ರಾಮೀಣ ಆವಾಸ್ ಯೋಜನೆ.

ಈ ಯೋಜನೆಯ ಮೂಲಕ‌ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಸಿಗಲಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು 2015ರ ಜೂನ್‌ 1ರಂದು ಮೊದಲ ಬಾರಿಗೆ ಜಾರಿ ಮಾಡಿದ್ದು, ಈ ಯೋಜನೆಯಡಿ ವಾರ್ಷಿಕ ಶೇ.6.50ರ ಬಡ್ಡಿದರದಲ್ಲಿ ಸಾಲ ಲಭ್ಯವಾಗುತ್ತದೆ. ಈ ಯೋಜನೆಯು ದೇಶದ ಎಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಅನ್ವಯವಾಗಲಿದ್ದು ಯೋಜನೆಯ ಸದುಪಯೋಗ ಪಡೆಯಬಹುದಾಗಿದೆ.

ಎಷ್ಟು ಸಾಲ ಸೌಲಭ್ಯ?

ಇದರ ಯೋಜನೆ ಅಡಿಯಲ್ಲಿ ಮಧ್ಯಮ ವರ್ಗದ ಆದಾಯ ಗುಂಪು 1 ಇದಕ್ಕೆ 6 ಲಕ್ಷದಿಂದ 12 ಲಕ್ಷ ರೂ ಹಾಗೆಯೇ ಮಧ್ಯಮ ಆದಾಯ ಗುಂಪು 2 ಇದರಲ್ಲಿ 12 ಲಕ್ಷದಿಂದ 18 ಲಕ್ಷ ರೂ.ಹಾಗೆಯೇ ಕಡಿಮೆ ಆದಾಯದ ಗುಂಪು ಗೆ 3 ಲಕ್ಷದಿಂದ 6 ಲಕ್ಷ ರೂ.ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗ ದವರಿಗೆ 3 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ಸಿಗಲಿದೆ

ಅರ್ಜಿ ಸಲ್ಲಿಸಲು ಈ ದಾಖಲೆ
*ಆದಾಯ ಪುರಾವೆ
*ಆಧಾರ್ ಕಾರ್ಡ್
*ರೇಷನ್ ಕಾರ್ಡ್
*ವಿಳಾಸ ಪುರಾವೆ
*ಪೋಟೋ
*ಬ್ಯಾಂಕ್ ಖಾತೆ

PMAY ಅಡಿಯಲ್ಲಿ ಎರಡು ಬಾರಿ ವಸತಿಗಾಗಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಈ ಕಾರಣಕ್ಕಾಗಿಯೇ ನೀವು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಆಧಾರ್ ಸಂಖ್ಯೆಯನ್ನು ತೆಗೆದುಕೊಳ್ಳಲಾಗುತ್ತದೆ. ಅರ್ಜಿ ಹಾಕಲು ಈ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ http://pmaymis.gov.in. ಅರ್ಜಿ ಸಲ್ಲಿಸಿ.

 
Previous articleಕ್ಷಿಪ್ರ ಕಾರ್ಯಾಚರಣೆ ನಡೆಸಿ ಚಡ್ಡಿಗ್ಯಾಂಗ್‌ ಬಂಧಿಸಿದ ಮಂಗಳೂರು ಪೊಲೀಸರು
Next articleಅಂಚೆ ಇಲಾಖೆಯಲ್ಲಿ 30,000 ಹುದ್ದೆಗಳಿಗೆ ಅರ್ಜಿ ಆಹ್ವಾನ