Home ಕರ್ನಾಟಕ ಜುಲೈ 3ರಿಂದ ಹೊಸ ಸರ್ಕಾರದ ಮೊದಲ ಅಧಿವೇಶನ ಆರಂಭ :ಹುಮ್ಮಸ್ಸಿನಲ್ಲಿ ಸಿದ್ದುಪಡೆ

ಜುಲೈ 3ರಿಂದ ಹೊಸ ಸರ್ಕಾರದ ಮೊದಲ ಅಧಿವೇಶನ ಆರಂಭ :ಹುಮ್ಮಸ್ಸಿನಲ್ಲಿ ಸಿದ್ದುಪಡೆ

0
ಜುಲೈ 3ರಿಂದ ಹೊಸ ಸರ್ಕಾರದ ಮೊದಲ ಅಧಿವೇಶನ ಆರಂಭ :ಹುಮ್ಮಸ್ಸಿನಲ್ಲಿ ಸಿದ್ದುಪಡೆ

ಬೆಂಗಳೂರು: ಇತ್ತೀಚಿಗಷ್ಟೇ ಬಹುಮತದಿಂದ ಗೆದ್ದು ಬಂದಿರುವ ಕಾಂಗ್ರೆಸ್ಸಿಗೆ ಇದೇ ಜುಲೈ 3ರಂದು ಮೊದಲ ಅಗ್ನಿಪರೀಕ್ಷೆ ನಡೆಯಲಿದೆ. ಪ್ರಸ್ತುತ ಸರ್ಕಾರದ ಮೊದಲ ಬಜೆಟ್‌ ಅಧಿವೇಶನ ಇದಾಗಿದ್ದು, ಜುಲೈ 7ರಂದು ಸಿಎಂ ಸಿದ್ದರಾಮಯ್ಯ ಬಜೆಟ್‌ ಮಂಡನೆ ಮಾಡಲಿದ್ದಾರೆ. ವಾಡಿಕೆಯಂತೆ ಅಧಿವೇಶನದ ಮೊದಲ ದಿನ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಭಾಷಣ ಮಾಡಲಿದ್ದಾರೆ.

ಈ ಅಧಿವೇಶನದಲ್ಲಿ ಹಲವಾರು ಬಿಲ್ ಗಳನ್ನು ಪಾಸ್ ಮಾಡಿಕೊಳ್ಳುವ ಇರಾದೆ ಈ ಸರ್ಕಾರಕ್ಕೆ ಇದೆ. ಇದಕ್ಕೆ ವಿರೋಧ ಪಕ್ಷಗಳು ಹೇಗೆ ನಡೆದುಕೊಳ್ಳುತ್ತವೆ ಎನ್ನುವುದು ಕುತೂಹಲಕ್ಕೀಡಾಗಿದೆ. ಇನ್ನು, 5 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿ ಅದನ್ನು ಕಾರ್ಯರೂಪಕ್ಕೆ ತಂದಿರುವ ಖುಷಿ ಕಾಂಗ್ರೆಸ್‌ ಸರ್ಕಾರಕ್ಕೆ ಇದೆ. ಅಂತೆಯೇ ಜುಲೈ 3ರ ಅಧಿವೇಶನ ಸರ್ಕಾರಕ್ಕೆ ಬಿಸಿ ತುಪ್ಪವಾಗುತ್ತದೆಯೋ ಅಥವಾ ಆರಾಮದಾಯಕವಾಗಿರುತ್ತದೆಯೋ ಎನ್ನುವುದನ್ನು ಕಾದು ನೋಡಬೇಕಿದೆ.

 

LEAVE A REPLY

Please enter your comment!
Please enter your name here