Home ಕರ್ನಾಟಕ ಕುಸ್ತಿಪಟುಗಳ ಹೋರಾಟಕ್ಕೆ‌ ವಿದೇಶಿ ಫಂಡಿಂಗ್: ಶೋಭಾ ಕರಂದ್ಲಾಜೆ ಗಂಭೀರ ಆರೋಪ

ಕುಸ್ತಿಪಟುಗಳ ಹೋರಾಟಕ್ಕೆ‌ ವಿದೇಶಿ ಫಂಡಿಂಗ್: ಶೋಭಾ ಕರಂದ್ಲಾಜೆ ಗಂಭೀರ ಆರೋಪ

ಉಡುಪಿ: ಕುಸ್ತಿಪಟುಗಳು ತಮ್ಮ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯ ವಿರುದ್ಧ ನ್ಯಾಯಕ್ಕಾಗಿ ಆಗ್ರಹಿಸಿ ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ವಿದೇಶದಿಂದ ಫಂಡಿಂಗ್ ಆಗಿದೆ. ಆ ಮೂಲಕ ದೇಶವನ್ನು ಅಸ್ಥಿರಗೊಳಿಸುವ ಷಡ್ಯಂತರ ನಡೆಯುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.


ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ಯಾವುದೇ ಪ್ರತಿಭಟನೆ ನಡೆದರೂ ಅದಕ್ಕೆ ಜಾಗತಿಕ ಬೆಂಬಲ ಸಿಗುತ್ತೆ. ಕೇಂದ್ರ ಸರಕಾರದ ವಿರುದ್ಧದ ಪ್ರತಿಭಟನೆಗಳಿಗೆ ವಿದೇಶೀ ಫಂಡಿಂಗ್ ಇದ್ದೇ ಇರುತ್ತದೆ. ಪ್ರತಿಭಟನೆಗೆ ಬೆಂಬಲ ನೀಡುತ್ತಿರುವ ವಿದೇಶೀ ವ್ಯಕ್ತಿ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ದೇಶವನ್ನು ಅಸ್ಥಿರಗೊಳಿಸುವ, ಅತಂತ್ರ ಮಾಡುವ ಹುನ್ನಾರ ಇದರ ಹಿಂದೆ ಅಡಗಿದೆ. ಕುಸ್ತಿಪಟುಗಳ ಆರೋಪದ ಬಗ್ಗೆ ಆಂತರಿಕ ತನಿಖೆ ನಡೆಯುತ್ತಿದೆ. ಯಾರನ್ನೂ ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದರು.

 
Previous articleಒಡಿಶಾ ರೈಲು ದುರಂತ; ಉನ್ನತ ಮಟ್ಟದ ತನಿಖೆ
Next articleಒಡಿಶಾ ರೈಲು ಅಪಘಾತದ ಗಾಯಾಳುಗಳನ್ನು ಕರೆದೊಯ್ಯುತ್ತಿದ್ದ ಬಸ್‌ ಅಪಘಾತ: ಆಸ್ಪತ್ರೆಗೆ ದಾಖಲು