Home ಕರ್ನಾಟಕ ಬೆಂಗಳೂರು ನಗರಕ್ಕೆ ನೂತನ ಪೊಲೀಸ್‌ ಕಮಿಷನರ್‌ ನೇಮಕ

ಬೆಂಗಳೂರು ನಗರಕ್ಕೆ ನೂತನ ಪೊಲೀಸ್‌ ಕಮಿಷನರ್‌ ನೇಮಕ

0
ಬೆಂಗಳೂರು ನಗರಕ್ಕೆ ನೂತನ ಪೊಲೀಸ್‌ ಕಮಿಷನರ್‌ ನೇಮಕ

ಬೆಂಗಳೂರು:ಬೆಂಗಳೂರು ನಗರದ ನೂತನ ಪೊಲೀಸ್‌ ಆಯುಕ್ತರಾಗಿ ಬಿ ದಯಾನಂದ ಅವರನ್ನು ನೇಮಕ ಮಾಡಲಾಗಿದೆ.  ಈ ಮೊದಲು ಪೊಲೀಸ್‌ ಆಯುಕ್ತರಾಗಿದ್ದ ಸಿ.ಎಚ್. ಪ್ರತಾಪ್ ರೆಡ್ಡಿ ಅವರನ್ನು ಆಂತರಿಕ ಭದ್ರತೆ ವಿಭಾಗದ ಡಿಜಿಪಿಯಾಗಿ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು ನಗರಕ್ಕೆ ನೂತನ ಪೊಲೀಸ್ ಆಯುಕ್ತರಾಗಿ ನೇಮಕವಾಗಿರುವ ಬಿ ದಯಾನಂದ್‌ ಅವರು ಈ ಮೊದಲು ಗುಪ್ತಚರ ಇಲಾಖೆ ಎಡಿಜಿಪಿಯಾಗಿದ್ದರು, ಅವರು 1994ರ ಕರ್ನಾಟಕ ಕೇಡರ್‌ನ ಐಪಿಎಸ್‌ ಅಧಿಕಾರಿಯಾಗಿದ್ದಾರೆ.

ಬೆಂಗಳೂರು ನಗರಕ್ಕೆ ಕಳೆದ ವರ್ಷ  2022ರ  ಮೇ 17ರಂದು ಪ್ರತಾಪ್‌ ರೆಡ್ಡಿ ಅವರನ್ನು ಪೊಲೀಸ್‌ ಆಯುಕ್ತರನ್ನಾಗಿ ನೇಮಕ ಮಾಡಲಾಗಿತ್ತು. ಇದೀಗ ಅವರ ವರ್ಗಾವಣೆಯಾಗಿದ್ದು, ಪ್ರತಾಪ್ ರೆಡ್ಡಿ ಅವರು ಆಂತರಿಕ ಭದ್ರತೆ ಡಿಜಿಪಿಯಾಗಿ ವರ್ಗಾವಣೆಗೊಂಡಿದ್ದಾರೆ.

ಅಲ್ಲದೆ ಸಿಐಡಿ ಡಿಜಿಯಾಗಿ ಬೆಂಗಳೂರು ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎಂ.ಎ. ಸಲೀಂ ವರ್ಗಾವಣೆಯಾಗಿದ್ದಾರೆ. ಇನ್ನು ಹಿರಿಯ ಅಧಿಕಾರಿ ಶರತ್ ಚಂದ್ರ ಅವರನ್ನು ಗುಪ್ತಚರ ಇಲಾಖೆ ಎಡಿಜಿಪಿಯಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

 

LEAVE A REPLY

Please enter your comment!
Please enter your name here