ರಾಜ್ಯ ಸರ್ಕಾರವು ಮಹಿಳೆಯರ ಅಭಿವೃದ್ಧಿಗಾಗಿ ಈ ಭಾರಿ ಎರಡು ಯೋಜನೆಗಳನ್ನು ಜಾರಿ ಮಾಡಿದೆ. ಅದರಲ್ಲಿ ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆ, ಈ ಯೋಜನೆಗಳು ಬಡವರ್ಗದ ಜನತೆಗೆ ಬಹಳಷ್ಟು ನೇರವಾಗುತ್ತಿದೆ. ತಿಂಗಳಿಗೆ ಎರಡು ಸಾವಿರ ರೂಪಾಯಿ ನೇರವಾಗಿ ಖಾತೆಗೆ ಜಮೆಯಾಗುವ ಮೂಲಕ ಫಲಾನುಭವಿಗಳು ಆರ್ಥಿಕ ನೆರವನ್ನು ಪಡೆಯುತ್ತಿದ್ದಾರೆ. ಆದರೆ ಈ ಬಾರಿ ಈ ಹಣ ಜಮೆಯಾಗಬೇಕಾದರೆ ಈ ಕೆಲಸ ಕಡ್ಡಾಯ ಎಂದು ಸಚಿವೆ ಸ್ಪಷ್ಟನೆ ನೀಡಿದ್ದಾರೆ.
ಹೌದು, ಈ ಭಾರಿಯ ಗೃಹಲಕ್ಷ್ಮಿ ಹಣ ಖಾತೆಗೆ ಜಮೆಯಾಗಬೇಕಾದರೆ ಆಧಾರ್ ನವೀಕರಣ ಕಡ್ಡಾಯ ವಾಗಿದೆ. ಈಗಾಗಲೇ ಆಧಾರ್ ಅಪ್ಡೇಟ್ ಮಾಡುವ ಬಗ್ಗೆ ಸರ್ಕಾರ ಹಲವು ಬಾರಿ ಸೂಚನೆ ಕೂಡ ನೀಡಿದೆ. 10 ವರ್ಷ ಹಳೆಯದಾದ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡುವುದು ಕಡ್ಡಾಯವಾಗಿದ್ದು ಈ ಬಗ್ಗೆ ಯುಐಡಿಎಐ ಮಹತ್ವದ ಮಾಹಿತಿ ನೀಡಿದೆ.
ಆಧಾರ್ ಕಾರ್ಡ್ ಹೊಂದಿರುವ ಜನರು ತಮ್ಮ ಬಯೋಮೆಟ್ರಿಕ್, ಹೆಸರು, ವಿಳಾಸ ಇತ್ಯಾದಿಗಳನ್ನು ನವೀಕರಿಸಬೇಕು ಎಂದು ಯುಐಡಿಎಐ ತಿಳಿಸಿದೆ. ಗ್ರಾಹಕರು ಮೈ ಆಧಾರ್ʼ ಪೋರ್ಟಲ್‌ನಲ್ಲಿ ಅಥವಾ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ನವೀಕರಣ ಮಾಡಬಹುದು.
ಸರ್ಕಾರವು ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್ಡೇಟ್ ಮಾಡಲು ಜೂನ್ 14ರ ವರೆಗೆ ಕಾಲಾವಕಾಶವನ್ನು ನೀಡಿದ್ದು. ಇನ್ನು ಜೂನ್ 14ನೇ ದಿನಾಂಕಕ್ಕೆ ಮೂರು ದಿನಗಳು ಮಾತ್ರ ಬಾಕಿ ಉಳಿದಿದೆ. ಹಾಗಾಗಿ ಈ ಮೊದಲು ನೀವು ಉಚಿತವಾಗಿ ನವೀಕರಣ ಮಾಡಬಹುದು.
ಈಗಾಗಲೇ ಗೃಹಲಕ್ಷ್ಮಿ ಹಣ ಹತ್ತು ಕಂತಿನವರೆಗೆ ಬಿಡುಗಡೆಯಾಗಿದ್ದು ಹನ್ನೊಂದನೆಯ ಕಂತಿನ ಹಣವೂ ಈ ತಿಂಗಳ ಹದಿನೈದರ ಒಳಗೆ ಖಾತೆಗೆ ಜಮೆಯಾಗಬಹುದು ಎನ್ನುವ ಮಾಹಿತಿ ವಿವಿಧ ಮೂಲದಿಂದ ತಿಳಿದು ಬಂದಿದೆ. ಈ ಹಣ ಜಮೆಯಾಗಬೇಕಾದರೆ ಮಹಿಳೆಯರು ರೇಷನ್ ಕಾರ್ಡ್ ಇಕೆವೈಸಿ, ಬ್ಯಾಂಕ್ ಕೆವೈಸಿ ಇದರ ಜೊತೆ ಆಧಾರ್ ಅಪ್ಡೇಟ್ ಮಾಡುವುದು ಕೂಡ ಕಡ್ಡಾಯವಾಗಿದೆ. 10 ವರ್ಷದ ಹಳೆಯ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಿಲ್ಲ ಎಂದರೆ ಆಧಾರ್ ಕಾರ್ಡ್ ಅನ್ನು ಮೊದಲು ಅಪ್ಡೇಟ್ ಮಾಡಿ.
