Home ಕರ್ನಾಟಕ ಹುಲಿ ಉಗುರು ಧರಿಸಿರುವ ಆರೋಪ: ಬಿಗ್‌ಬಾಸ್‌ ಕಂಟೆಸ್ಟೆಂಟ್‌ ಅರೆಸ್ಟ್

ಹುಲಿ ಉಗುರು ಧರಿಸಿರುವ ಆರೋಪ: ಬಿಗ್‌ಬಾಸ್‌ ಕಂಟೆಸ್ಟೆಂಟ್‌ ಅರೆಸ್ಟ್

0
ಹುಲಿ ಉಗುರು ಧರಿಸಿರುವ ಆರೋಪ: ಬಿಗ್‌ಬಾಸ್‌ ಕಂಟೆಸ್ಟೆಂಟ್‌ ಅರೆಸ್ಟ್

ಬೆಂಗಳೂರು: ಈಗಾಗಲೇ ಬಿಗ್‌ ಬಾಸ್‌ ಸೀಸನ್‌ 10 ಆರಂಭವಾಗಿ ಅದ್ಭುತ ಪ್ರದರ್ಶನ ಕಾಣುತ್ತಿದೆ. ಬಿಗ್‌ಬಾಸ್‌ ಇತಿಹಾಸದಲ್ಲಿ ಎಂದೂ ನಡೆಯದ ಘಟನೆಯೊಂದು ಈ ಬಾರಿ ನಡೆದಿದ್ದು, ಮೊದಲ ಬಾರಿಗೆ ಬಿಗ್‌ಬಾಸ್‌ ಮನೆಯಿಂದಲೇ ಸ್ಪರ್ಧಿಯೋರ್ವರನ್ನು ಅರೆಸ್ಟ್‌ ಮಾಡಲಾಗಿದೆ.‌

ಹೌದು, ಬಿಗ್‌ಬಾಸ್‌ ಸೀಸನ್‌ 10ರ ಸ್ಪರ್ಧಿ ಕೃಷಿಕ ವರ್ತೂರು ಸಂತೋಷ್‌ ಅವರನ್ನು ರಾಮೋನಹಳ್ಳಿ ಅರಣ್ಯಾಧಿಕಾರಿಗಳು ಬಿಗ್‌ಬಾಸ್‌ ಮನೆಯೊಳಗೆ ಹೋಗಿ ಬಂಧಿಸಿದ್ದಾರೆ. ಹುಲಿಯ ಉಗುರು ಇರುವ ಲಾಕೆಟ್‌ ಧರಿಸಿರುವ ಹಿನ್ನೆಲೆ ಅವರನ್ನು ಅರೆಸ್ಟ್‌ ಮಾಡಲಾಗಿದ್ದು, ಸದ್ಯ ವರ್ತೂರು ಸಂತೋಷ್‌ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ಬಿಗ್‌ಬಾಸ್‌ ಮನೆಯೊಳಗೆ ಹೋಗುವ ಮುನ್ನವೇ ಅರಣ್ಯಾಧಿಕಾರಿಳು ಅವರ ವಿರುದ್ಧ ಕೇಸ್‌ ದಾಖಲಿಸಿ, ಬಳಿಕ ಅವರನ್ನು ಬಿಗ್‌ ಬಾಸ್‌ ಮನೆಯೊಳಗೆ ಹೋಗಿ ಅರೆಸ್ಟ್‌ ಮಾಡಿದ್ದಾರೆ ಎನ್ನಲಾಗಿದೆ.

 

LEAVE A REPLY

Please enter your comment!
Please enter your name here