Home ಕರ್ನಾಟಕ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಹಾಲಿನ ದರವು ಹೆಚ್ಚಳ!

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಹಾಲಿನ ದರವು ಹೆಚ್ಚಳ!

0
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಹಾಲಿನ ದರವು ಹೆಚ್ಚಳ!

ದಿನನಿತ್ಯದ ವಸ್ತುಗಳ‌ ಬೆಲೆಯಲ್ಲಿ ಬಹಳಷ್ಟು ಏರಿಕೆ ಆಗುತ್ತಿದ್ದು ಇತ್ತೀಚೆಗಷ್ಟೆ ಪೆಟ್ರೋಲ್ ಡಿಸೇಲ್ ಬೆಲೆ ಮೂರು ರೂಪಾಯಿ ಏರಿಕೆಯಾಗಿತ್ತು. ಈ ಬೆನ್ನಲ್ಲೇ ತರಕಾರಿ ಬೆಲೆ ಕೂಡ ಏರಿಕೆಯಾಗಿತ್ತು.‌ಇದೀಗ ಒಂದು ಲೀಟರ್ ಹಾಲಿನ ಮೇಲೆ 2.10 ರೂಪಾಯಿ ಏರಿಕೆಯಾಗಿದ್ದು, ಜನ ಸಾಮಾನ್ಯರಿಗೆ ಬೆಲೆ ಏರಿಕೆ ಮತ್ತಷ್ಟು ಶಾಕ್ ನೀಡಿದೆ.

ಸದ್ಯ ಲೀಟರ್ ಹಾಲಿಗೆ ಇರುವ 42 ರೂಪಾಯಿ ಇರುವ ದರವನ್ನು 2 ರೂಪಾಯಿ ಹೆಚ್ಚಳ ಮಾಡಿದೆ. ಸದ್ಯ ರಾಜ್ಯದಲ್ಲಿ ಒಂದು ಲೀಟರ್ ಹಾಲಿಗೆ 42 ರೂಪಾಯಿ ಇದೆ, ಅದನ್ನು 44 ರೂಪಾಯಿಗೆ ಏರಿಸಲು ನಿರ್ಧರಿಸಲಾಗಿದೆ. ಹಾಲಿಗೆ ಮಾತ್ರ ಬೆಲೆ ಏರಿಕೆ ಆಗಲಿದ್ದು, ಮೊಸರು, ತುಪ್ಪ, ಹಾಲಿನ ಉತ್ಪನ್ನಗಳ ಬೆಲೆ ಏರಿಕೆ ಇಲ್ಲ ಎನ್ನಲಾಗಿದೆ. ಹಾಲಿನ ದರ ಹೆಚ್ಚಳದ ಬಗ್ಗೆ ಕರ್ನಾಟಕ ಸಹಕಾರ ಉತ್ಪಾದಕ ಮಹಾಮಂಡಳ ನಿಯಮಿತವು ಅಧಿಕೃತವಾಗಿ ಪತ್ರಿಕಾ ಪ್ರಕಟಣೆ ಕೂಡ ಹೊರಡಿಸಿದೆ.

ಅರ್ಧ ಲೀಟರ್ ಹಾಲಿನ ಪ್ಯಾಕೆಟ್​ ದರ 22ರಿಂದ 24 ರೂ.ಗೆ ಏರಿಕೆಯಾಗಲಿದೆ. ಕೇರಳದಲ್ಲಿ ಒಂದು ಲೀಟರ್ ಹಾಲಿನ ಬೆಲೆ 52 ರುಪಾಯಿ ಇದೆ. ಗುಜರಾತ್​​​​ನಲ್ಲಿ ಅಮುಲ್ ಒಂದು ಲೀಟರ್​ಗೆ 56 ರೂ. ಮಹಾರಾಷ್ಟ್ರದಲ್ಲಿ 56 ರೂ. ದೆಹಲಿ ಮದರ್ ಡೈರಿಯ ಹಾಲಿನ ಬೆಲೆ 54 ರೂ. ವರೆಗೆ ಇರಲಿದೆ.

ದರ ಹೆಚ್ಚಳ ಪಟ್ಟಿ ಇಲ್ಲಿದೆ

*ನೀಲಿ ಪ್ಯಾಕೆಟ್ ಹಾಲು – 42 ರಿಂದ 44 ರೂಪಾಯಿಗೆ ಹೆಚ್ಚಳ
*ನೀಲಿ ಪ್ಯಾಕೆಟ್ (ಟೋನ್ಡ್ ಹಾಲು) – 43 ರಿಂದ 45 ರೂಪಾಯಿಗೆ ಹೆಚ್ಚಳ
*ಆರೆಂಜ್ ಪ್ಯಾಕೆಟ್ ಹಾಲು – 46 ರಿಂದ 48 ರೂಪಾಯಿಗೆ ಏರಿಕೆ
*ಆರೆಂಜ್ ಸ್ಪೆಷಲ್ ಹಾಲು- 48 ರಿಂದ 50 ರೂಪಾಯಿಗೆ ಹೆಚ್ಚಳ
*ಶುಭಂ ಹಾಲು – 48 ರಿಂದ 50 ರೂಪಾಯಿಗೆ ಹೆಚ್ಚಳ
*ಸಮೃದ್ದಿ ಹಾಲು – 51 ರಿಂದ 53 ರೂಪಾಯಿಗೆ ಏರಿಕೆ
*ಶುಭಂ (ಟೋನ್ಡ್ ಹಾಲು) – 49 ರಿಂದ 51 ರೂಪಾಯಿಗೆ ಹೆಚ್ಚಳ
*ಸಂತೃಪ್ತಿ ಹಾಲು – 55 ರಿಂದ 57 ರೂಪಾಯಿಗೆ ಏರಿಕೆ

 

LEAVE A REPLY

Please enter your comment!
Please enter your name here