Home ಬೆಂಗಳೂರು ನಗರ ದ್ವಾರಕೀಶ್ ಅಗಲಿಕೆ ನೋವು ತಂದಿದೆ: ರಜನಿಕಾಂತ್

ದ್ವಾರಕೀಶ್ ಅಗಲಿಕೆ ನೋವು ತಂದಿದೆ: ರಜನಿಕಾಂತ್

ಕನ್ನಡ ಸಿನಿಮಾ ರಂಗದಲ್ಲಿ ಮಿಂಚಿದ ನಟ, ನಿರ್ಮಾಪಕ, ನಿರ್ದೇಶಕ ‘ದ್ವಾರಕೀಶ್’ ಏಪ್ರಿಲ್ 16ರ ಬೆಳಗ್ಗೆ ಹೃದಯಾಘಾತದಿಂದ ಅಪಾರ ಅಭಿಮಾನಿ ಬಳಗ ಮತ್ತು ಕುಟುಂಬದವರನ್ನು ಅಗಲಿದ್ದಾರೆ. ಅವರ ಈ ಅಗಲಿಕೆಗೆ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಇದೀಗ ದ್ವಾರಕೀಶ್ ಅವರ ಬಹುಕಾಲದ ಗೆಳೆಯ ಕ
ರಜನಿಕಾಂತ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ರಜನಿ, ನನ್ನ ಬಹುಕಾಲದ ಆತ್ಮೀಯ ಗೆಳೆಯ ದ್ವಾರಕೀಶ್ ಅವರ ನಿಧನ ನನಗೆ ಅತೀ ನೋವನ್ನು ತಂದಿದೆ. ಹಾಸ್ಯ ನಟನಾಗಿ ವೃತ್ತಿ ಜೀವನ ಆರಂಭಿಸಿ, ಆನಂತರ ದೊಡ್ಡ ನಿರ್ಮಾಪಕರು ಹಾಗೂ ನಿರ್ದೇಶಕರಾಗಿ ಬೆಳೆದರು ಹಾಗೂ ಬೆಳೆಸಿದರು. ಅವರ ಅಗಲಿಕೆ ನೋವು ತಂದಿದೆ. ಅವರಿಗೆ ಭಾವ ಪೂರ್ಣ ಸಂತಾಪ ಎಂದು ಬರೆದುಕೊಂಡಿದ್ದಾರೆ.

 
Previous articleನಟ ದ್ವಾರಕೀಶ್ ನಿಧನಕ್ಕೆ ಸಂತಾಪ ಸೂಚಿಸಿದ ಕನ್ನಡ ಚಿತ್ರರಂಗ
Next articleಎ. 21ರಂದು ಕಾಪುವಿನಲ್ಲಿ ಬೃಹತ್ ರೋಡ್ ಶೋ ಸಂಸದ ಪ್ರತಾಪ್ ಸಿಂಹ ಭಾಗಿ