Home ಬೆಂಗಳೂರು ನಗರ ಅಪರಾಧಿ-ಅತ್ಯಾಚಾರಿಗಳಿಗೆ ಸರಕಾರದ ರಕ್ಷಣೆ: ಬೊಮ್ಮಾಯಿ ಗರಂ

ಅಪರಾಧಿ-ಅತ್ಯಾಚಾರಿಗಳಿಗೆ ಸರಕಾರದ ರಕ್ಷಣೆ: ಬೊಮ್ಮಾಯಿ ಗರಂ

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರ ಅಪರಾಧಿಗಳಿಗೆ, ಅತ್ಯಾಚಾರಿಗಳಿಗೆ ರಕ್ಷಣೆ ನೀಡುತ್ತಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಶನಿವಾರ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಅತ್ಯಚಾರ ಪ್ರಕರಣಗಳು ಹೆಚ್ಚುತ್ತಿದ್ದರೂ‌ ರಾಜ್ಯ ಸರಕಾರ ಕಣ್ಣು ಮುಚ್ವಿ ಕುಳಿತಿದೆ. ಹಾವೇರಿಯ ಹಾನಗಲ್ ನಲ್ಲಿ ನಡೆದ ಅತ್ಯಾಚಾರದ ಪ್ರಕರಣದ ಬಳಿಕ ಇದೀಗ ಬ್ಯಾಡಗಿಯಲ್ಲಿ ನಡೆದ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಇಂಥ ಘಟನೆ ಹಲವೆಡೆ ನಡೆದಿದ್ದು, ಒಂದೊಂದಾಗಿ ಬೆಳಕಿಗೆ ಬರುತ್ತಿವೆ ಎಂದು ಆರೋಪಿಸಿದ್ದಾರೆ.

ಇಂಥ ಘಟನೆಗಳು ನಡೆಯುತ್ತಿದ್ದರೂ‌ ರಾಜ್ಯದ ಪೊಲೀಸ್ ಇಲಾಖೆ ಕಣ್ಣು ಮುಚ್ಚಿ ಕುಳಿತಿರುವುದು‌ ವಿಪರ್ಯಾಸ. ಅಲ್ಲದೇ ಮಟ್ಕಾ, ಜೂಜು, ಅಕ್ರಮ ಸಾರಾಯಿ ಮಾರಾಟರರಿಗೆ, ಪೊಲೀಸರು ಕುಮ್ಮಕ್ಕು ನೀಡುತ್ತಿದ್ದಾರೆ. ಸರಕಾರ ಹಣ ವಸೂಲಿ ಮಾಡಿ ಪೊಲೀಸರನ್ನು ವರ್ಗಾವಣೆ ಮಾಡಿರುವುದೇ ಇದಕ್ಕೆಲ್ಲ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

 
Previous articleಪುತ್ತಿಗೆ ಶ್ರೀಗಳು ನಾಡು ಕಂಡ ಶ್ರೇಷ್ಠ ಸಂತರಲ್ಲಿ ಒಬ್ಬರು; ಪರ್ಯಾಯ ಮಹೋತ್ಸವದಲ್ಲಿ ಭಾಗವಹಿಸಲಾಗಿಲ್ಲ; ಪ್ರಹ್ಲಾದ್ ಜೋಶಿ
Next articleಪುತ್ತಿಗೆ ಪರ್ಯಾಯೋತ್ಸವ: ದಾಖಲೆ ಪ್ರಮಾಣದಲ್ಲಿ ಹೊರೆಕಾಣಿಕೆ ಸಲ್ಲಿಕೆ