ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದೇಶ ಹಾಗೂ ರಾಜ್ಯಮಟ್ಟದಲ್ಲಿ ಗ್ರಾಮ ಗ್ರಾಮಗಳನ್ನು ತಲುಪುವುದಕ್ಕಾಗಿ “ಗ್ರಾಮ ಚಲೋ” ಅಭಿಯಾನವನ್ನು ಫೆ. 9ರಿಂದ ಪ್ರಾರಂಭಿಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.
ಅಭಿಯಾನದ ಸಂಚಾಲಕರಾಗಿರುವ ಅವರು ಪಕ್ಷದ ಕಚೇರಿಯಲ್ಲಿ ಸಿದ್ಧತಾ ಸಭೆ ನಡೆಸಿ ಮಾತನಾಡಿದರು.
ಕರ್ನಾಟಕದ 28 ಸಾವಿರ ಕಂದಾಯ ಗ್ರಾಮಗಳು ಹಾಗೂ 19 ಸಾವಿರ ನಗರ ಬೂತ್‌ಗಳನ್ನು ಸಂಪರ್ಕಿಸಲಾಗುವುದು ಸುಮಾರು ೪೦ ಸಾವಿರ ಕಾರ್ಯಕರ್ತರನ್ನು ಈ ಅಭಿಯಾನಕ್ಕೆ ಜೋಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಫೆ. 9, 10 ಹಾಗೂ 11ರಂದು ಮೂರು ದಿನಗಳ ಕಾಲ ಮೊದಲ ಹಂತದಲ್ಲಿ ಅಭಿಯಾನ ನಡೆಯುತ್ತದೆ. ಕಾರ್ಯಕರ್ತರು ತಾವು ನಿಯೋಜನೆಗೊಂಡ ಗ್ರಾಮವನ್ನು ಬಿಟ್ಟು ಬೇರೆ ಗ್ರಾಮಕ್ಕೆ ಹೋಗಿ 24 ಗಂಟೆ ಕಾಲ ವಾಸ್ತವ್ಯವಿದ್ದು, ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಆಶಯಗಳ ಬಗ್ಗೆ ಜಾಗೃತಿ ಮೂಡಿಸಬೇಕಾಗುತ್ತದೆ. ತಳಮಟ್ಟದಲ್ಲಿ ಪ್ರತಿಯೊಬ್ಬರನ್ನೂ ತಲುಪುವ ಜತೆಗೆ ರಾಜ್ಯ ಸರ್ಕಾರದ ದುರಾಡಳಿತದ ವಿರುದ್ಧವೂ ಜನಜಾಗೃತಿ ರೂಪಿಸಲಾಗುತ್ತದೆ ಎಂದು ಹೇಳಿದರು.
ಮುಖ್ಯಾಂಶಗಳು :
ಬೃಹತ್ ಸಂಘಟನಾತ್ಮಕ ಕಾಯತಂತ್ರ
ಫೆ 9, 10, 11 ರಿಂದ ಏಕಕಾಲಕ್ಕೆ ಅಖಾಡಕ್ಕೆ ಧುಮುಕಲಿರುವ ಕಾರ್ಯರ್ತರ ಪಡೆ
40 ಸಾವಿರ ಕಾಯಕರ್ತರ ಜೋಡಣೆ
29 ಸಾವಿರ ಗ್ರಾಮ, 10 ಸಾವಿರಕ್ಕೂ ಅಧಿಕ ನಗರ ಬೂತ್ ಸಂಪರ್ಕ
ತಾಲೂಕು ಮಟ್ಟದಲ್ಲಿ 350 ಕಾರ್ಯಾಗಾರ
ಮನೆಮನೆಗೆ ಮೋದಿ ಸರ್ಕಾರದ ಸಾಧನೆಯ ಪ್ರಸಾರ
ಮೋದಿ ಗ್ಯಾರಂಟಿಯ ಫಲಾನುಭವಿಗಳನ್ನು ತಲುಪುವ ಮಹಾಭಿಯಾನ
ಬೂತ್ ಸಶಕ್ತಿಕರಣದ ಜತೆಗೆ ಕಾರ್ಯಕರ್ತರಿಗೆ ಬಲ ತುಂಬುವುದು
ರಾಜ್ಯ ಸರ್ಕಾರದ ದುರಾಡಳಿತದ ವಿರುದ್ಧ ಜನಜಾಗೃತಿ
2019ರ ಲೋಕಸಭಾ ಚುನಾವಣೆಗಿಂತ ಶೇ.10ರಷ್ಟು ಹೆಚ್ಚು ಮತ ಗಳಿಕೆಗೆ ಯತ್ನ
ಮನೆಮನೆಗೆ ಬಿಜೆಪಿ, ಮನಮನಕ್ಕೆ ಮೋದಿ
