ಇಂದು ಆಧಾರ್ ಕಾರ್ಡ್ ಅನ್ನುವುದು ಬಹು ಮುಖ್ಯವಾದ ದಾಖಲೆ ಆಗಿದ್ದು, ಸರ್ಕಾರದ ಯಾವುದೇ ಸೌಲಭ್ಯ ಪಡೆಯಲು ಈ ಆಧಾರ್ ಕಾರ್ಡ್ ಅನ್ನುವುದು ಅಗತ್ಯವಾಗಿ ಬೇಕೆ ಬೇಕು. ಅದೇ ರೀತಿ ಇತರ ದಾಖಲೆಯಾದ ಪಾನ್ ಕಾರ್ಡ್, ಬ್ಯಾಂಕ್ ಖಾತೆ, ರೇಷನ್ ಕಾರ್ಡ್ ಗಳಿಗೆ ಲಿಂಕ್ ಮಾಡಿಸುವುದು ಸಹ ಕಡ್ಡಾಯವಾಗಿದೆ. ಅದರಲ್ಲೂ ಪಡಿತರ ಚೀಟಿಗೆ ಒಂದು ರಾಷ್ಟ್ರ, ಒಂದು ಪಡಿತರ ಎಂದು ಸರ್ಕಾರ ಘೋಷಣೆ ಮಾಡಿದ ನಂತರದಲ್ಲಿ ಅದನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಆದ್ಯತೆ ಕೂಡ ನೀಡಲಾಗಿದೆ. ಪಡಿತರ ಚೀಟಿ ಮೂಲಕ ಕಡಿಮೆ ದರದಲ್ಲಿ ಅಗ್ಗದ ಆಹಾರ ಧಾನ್ಯಗಳನ್ನು ಪಡೆಯಬಹುದು. ಅದರ ಜೊತೆಗೆ ಸರ್ಕಾರದ ಇನ್ನೂ ಅನೇಕ ಪ್ರಯೋಜನಗಳು ಸಿಗಲಿದೆ.
ಅವಧಿ ವಿಸ್ತರಣೆ.
ಇದೀಗ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಲಿಂಕ್ ಮಾಡಲು ಇದ್ದ ಸಮಯವನ್ನು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವಿಸ್ತರಣೆ ಮಾಡಿದೆ. ಇದಕ್ಕಾಗಿ 2024ರ ಜೂ. 30ರಂದು ಕಡೆಯ ದಿನವಾಗಿತ್ತು. ಈಗ ಈ ಗಡುವನ್ನು ಮೂರು ತಿಂಗಳವರೆಗೆ ಅಂದರೆ ಸೆಪ್ಟಂಬರ್ 30ರವರೆಗೆ ವಿಸ್ತರಿಸಲಾಗಿದೆ.
ಯಾಕಾಗಿ ಈ ನಿಯಮ?
ಇಂದು ಅರ್ಹತೆ ಇಲ್ಲದವರೂ ಕೂಡ ಪಡಿತರ ಅಂಗಡಿಗಳಲ್ಲಿ ಸಬ್ಸಿಡಿ ಧಾನ್ಯಗಳನ್ನು ಪಡೆಯುತ್ತಿದ್ದಾರೆ. ಇದರಿಂದ ಅರ್ಹರಿಗೆ ಸಬ್ಸಿಡಿ ಧಾನ್ಯಗಳು ಸಿಗುತ್ತಿಲ್ಲ. ಇದಕ್ಕೆ ಕಡಿವಾಣ ಹಾಕಲು ಈ ನಿಯಮ ಕಡ್ಡಾಯ ವಾಗಿದೆ. ಕೆಲವರು ಒಂದಕ್ಕಿಂತ ಅಧಿಕ ರೇಷನ್ ಕಾರ್ಡ್ ಹೊಂದಿದ್ದು, ಇದರ ಲಾಭ ಪಡೆಯುತ್ತಿದ್ದಾರೆ. ಇದಲ್ಲದೆ, ಪಡಿತರ ಚೀಟಿಗಳಲ್ಲಿ ಮೃತರ ಹೆಸರನ್ನು ತೆಗೆಯದೆ ಹೆಚ್ಚುವರಿ ಸೌಲಭ್ಯ ಪಡೆಯುತ್ತಿದ್ದಾರೆ. ಇಂತಹ ಆಕ್ರಮಗಳನ್ನು ತಡೆಗಟ್ಟಲು ಈ ಕ್ರಮ ಜಾರಿ ಮಾಡಿದೆ.
ಹೀಗೆ ಮಾಡಿ
ಮೊದಲಿಗೆ ನೀವು food.wb.gov.in. ನಲ್ಲಿ ಸರ್ಕಾರದ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಇಲ್ಲಿ ಲಾಗಿನ್ ಆಗಿ, ಬಳಿಕ ನೀವು ಆಧಾರ್ ಕಾರ್ಡ್ ಸಂಖ್ಯೆ, ರೇಷನ್ ಕಾರ್ಡ್ ಸಂಖ್ಯೆ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಂತಹ ಅಗತ್ಯವಿರುವ ಮಾಹಿತಿಗಳನ್ನು ಹಾಕಿ. ನಿಮ್ಮ ವಿವರಗಳನ್ನು ಭರ್ತಿ ಮಾಡಿದ ನಂತರ, ನೀವು ಮುಂದುವರಿಸಿ ಕ್ಲಿಕ್ ಮಾಡಿ, ನೀವು ನಮೂದಿಸಿದ ಸಂಖ್ಯೆಯ ಮೇಲೆ OTP ಬರುತ್ತದೆ, ಅದನ್ನು ಹಾಕಿ. ಬಳಿಕ ನಿಮ್ಮ ಪಡಿತರ ಚೀಟಿಯನ್ನು ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲಾಗುತ್ತದೆ.
ಈ ದಾಖಲೆ ಬೇಕು
*ಪಡಿತರ ಚೀಟಿದಾರರ ಆಧಾರ್ ಕಾರ್ಡ್ ಪ್ರತಿ,
*ರೇಷನ್ ಕಾರ್ಡ್ ಮತ್ತು ಪಾಸ್‌ಪೋರ್ಟ್ ಅಳತೆಯ ಫೋಟೋ
*ಮೊಬೈಲ್ ಸಂಖ್ಯೆ
*ವಿಳಾಸ ಮಾಹಿತಿ
*ವೋಟರ್ ಐಡಿ
