
ಚಾರ್ಮಾಡಿ: ಸರ್ಕಾರಿ ಬಸ್ಸಿಗೆ ಏಕಾಏಕಿ ಕಾಡಾನೆ ಅಡ್ಡಬಂದು ಪ್ರಯಾಣಿಕರು ಕಂಗಾಲಾದ ಘಟನೆ ಚಾರ್ಮಾಡಿ ಘಾಟಿಯ 7 ಮತ್ತು 8ನೇ ತಿರುವಿನಲ್ಲಿ ನಡೆದಿದೆ. ಆನೆ ಅಡ್ಡ ಬಂದ ತಕ್ಷಣ ಚಾಲಕ ಬಸ್ಸನ್ನು ನಿಲ್ಲಿಸಿದ್ದ ಕಾರಣ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಇತ್ತೀಚೆಗೆ ಚಾರ್ಮಾಡಿ ಪರಿಸರದಲ್ಲಿ ಕಾಡಾನೆಗಳ ಹಾವಳಿ ಹೆಚ್ಚುತ್ತಿದ್ದು, ಬಸ್ಸು ಸಂಚರಿಸುತ್ತಿದ್ದ ವೇಳೆ ಏಕಾಏಕಿ ಕಾಡಾನೆ ಬಸ್ಸಿಗೆ ಅಡ್ಡ ಬಂದಿದೆ. ಕೂಡಲೇ ಎಚ್ಚೆತ್ತ ಬಸ್ ಚಾಲಕ ಬಸ್ಸನ್ನು ನಿಲ್ಲಿಸಿದ್ದಾನೆ. ಬಸ್ಸಿನ ಎದುರು ನಿಂತಿದ್ದ ಕಾಡಾನೆಯನ್ನು ನೋಡಿ ಪ್ರಯಾಣಿಕರು ಕಂಗಾಲಾಗಿದ್ದು, ಸುಮಾರು ಅರ್ಧ ಗಂಟೆ ಬಳಿಕ ಆನೆ ಕಾಡಾನೆ ಪ್ರವೇಶ ಮಾಡಿದೆ. ಇದರಿಂದಾಗಿ ಸುಮಾರು 2ಕಿ.ಮೀ ವರೆಗೆ ಟ್ರಾಫಿಕ್ ಜಾಮ್ ಉಂಟಾಗಿದೆ.
ರಾತ್ರಿ ಸಮಯದಲ್ಲಿ ಈ ಮಾರ್ಗದಲ್ಲಿ ಕಾಡಾನೇಗಳ ಉಪಟಳ ಹೆಚ್ಚಾಗಿದ್ದು, ಕಳೆದ ಎರಡು ತಿಂಗಳಿನಿಂದ ಚಾರ್ಮಾಡಿ ಪರಿಸರದಲ್ಲಿ ಕಾಡಾನೆಯೊಂದು ಬೀಡು ಬಿಟ್ಟಿದ್ದು, ಅದನ್ನು ಆದಷ್ಟು ಬೇಗ ಸ್ಥಳಾಂತರಿಸುವಂತೆ ಅರಣ್ಯಾಧಿಕಾರಿಗಳಿಗೆ ಸ್ಥಳೀಯರು ಮನವಿ ಮಾಡಿದ್ದಾರೆ.
