Home ಕರ್ನಾಟಕ ಕರಾವಳಿ ವೈಜ್ಞಾನಿಕವಾಗಿ ಕಿರು ಜೆಟ್ಟಿ ಕಾಮಗಾರಿ ನಡೆಸಲು ಸೂಚನೆ: ಡಾ.ಭರತ್ ಶೆಟ್ಟಿ

ವೈಜ್ಞಾನಿಕವಾಗಿ ಕಿರು ಜೆಟ್ಟಿ ಕಾಮಗಾರಿ ನಡೆಸಲು ಸೂಚನೆ: ಡಾ.ಭರತ್ ಶೆಟ್ಟಿ

0
ವೈಜ್ಞಾನಿಕವಾಗಿ ಕಿರು ಜೆಟ್ಟಿ ಕಾಮಗಾರಿ ನಡೆಸಲು ಸೂಚನೆ: ಡಾ.ಭರತ್ ಶೆಟ್ಟಿ

ಪಣಂಬೂರು: ಮಂಗಳವಾರ ಕಿರು ಜೆಟ್ಟಿ ಕಾಮಗಾರಿ ಪ್ರದೇಶಕ್ಕೆ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಭೇಟಿ ನೀಡಿದರು.

ಈ ಸಂದರ್ಭ ಸ್ಥಳೀಯ ಮೀನುಗಾರರ ಅಭಿಪ್ರಾಯ ಸಂಗ್ರಹಿಸಿ, ಸಂಬಂಧಿತ ಆಧಿಕಾರಿಗಳಿಗೆ ಸೂಚನೆ ನೀಡಿ ಸಮರ್ಪಕ ಕಾಮಗಾರಿ ಆದೇಶ ನೀಡಲಾಗುವುದು ಎಂದು ಭರವಸೆ ನೀಡಿದರು.


ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವಋತು ಬಂದರು ಮೀನುಗಾರಿಕೆ ವರ್ಷಪೂರ್ತಿ ನಡೆಯುವಂತಾಗಬೇಕು ಎಂಬ ನಿಟ್ಟಿನಲ್ಲಿ ಈ ಕಿರು ಜೆಟ್ಟಿ ನಿರ್ಮಾಣಗೊಳ್ಳಬೇಕಿದೆ. ಈಗಿರುವ ಬ್ರೇಕ್ ವಾಟರ್ ಉದ್ದಕ್ಕಿಂತ ಅಂದಾಜು ನೂರು ಮೀಟರ್ ದೂರಕ್ಕೆ ಹೋಗಬೇಕು ಎಂಬುದು ಮೀನುಗಾರರ ಅಭಿಪ್ರಾಯ. ಇದೀಗ ಒಂದು ಮಳೆಗೆ ಬ್ರೇಕ್ ವಾಟರ್ ಕಲ್ಲುಗಳಿಗೆ ಸಮುದ್ರದ ತೆರೆಗಳು ಅಪ್ಪಳಿಸುತ್ತಿವೆ. ಕಲ್ಲುಗಳು ಕೊಚ್ಚಿಹೋಗಿರುವ ಬಗ್ಗೆ ಹಾಗೂ ಭವಿಷ್ಯದಲ್ಲಿ ಮೀನುಗಾರರಿಗೆ ಯಾವುದೇ ಸಮಸ್ಯೆ ಎದುರಾಗದಂತೆ ವೈಜ್ಞಾನಿಕವಾಗಿ ಕಿರು ಜೆಟ್ಟಿ ನಿರ್ಮಾಣಕ್ಕೆ ಒತ್ತು ನೀಡಿ ಕ್ರಮ ಜರಗಿಸುವಂತೆ ಎನ್‍ಎಂಪಿಎ ಅಧಿಕಾರಿಗಳಲ್ಲಿ ಮಾತುಕತೆ ನಡೆಸಿದ್ದೇನೆ. ಸಂಸದರೂ ಕೂಡ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ. ಯಾವುದೇ ರೀತಿ ಕೋಟ್ಯಾಂತರ ಅನುದಾನ ಪೋಲಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಹೇಳಿದರು.

ಉಪಮೇಯರ್ ಸುನಿತಾ, ಮನಪಾ ಸದಸ್ಯೆ ಸುಮಿತ್ರ ಕರಿಯಾ, ಬಿಜೆಪಿ ಮುಖಂಡ ಅರವಿಂದ್ ಬೆಂಗ್ರೆ, ರಾಜೇಶ್ ಸಾಲ್ಯಾನ್ ಬೈಕಂಪಾಡಿ, ಅಶ್ವಥ್ ಕಾಂಚನ್ ಮತ್ತಿತರರು ಜೊತೆಗಿದ್ದರು.

 

LEAVE A REPLY

Please enter your comment!
Please enter your name here