Home ಕರ್ನಾಟಕ ಕರಾವಳಿ ಬಹುಸಂಖ್ಯಾತ ಹಿಂದೂಗಳ ಜೊತೆ ಚೆಲ್ಲಾಟವಾಡಬೇಡಿ: ಪಶುಸಂಗೋಪನ ಸಚಿವರಿಗೆ ಶಾಸಕ ಯಶ್ ಪಾಲ್ ತಿರುಗೇಟು

ಬಹುಸಂಖ್ಯಾತ ಹಿಂದೂಗಳ ಜೊತೆ ಚೆಲ್ಲಾಟವಾಡಬೇಡಿ: ಪಶುಸಂಗೋಪನ ಸಚಿವರಿಗೆ ಶಾಸಕ ಯಶ್ ಪಾಲ್ ತಿರುಗೇಟು

0
ಬಹುಸಂಖ್ಯಾತ ಹಿಂದೂಗಳ ಜೊತೆ ಚೆಲ್ಲಾಟವಾಡಬೇಡಿ: ಪಶುಸಂಗೋಪನ ಸಚಿವರಿಗೆ ಶಾಸಕ ಯಶ್ ಪಾಲ್ ತಿರುಗೇಟು

ಉಡುಪಿ: ಎಮ್ಮೆ, ಕೋಣ ಕಡಿಯುವುದಾದ್ರೆ ಹಸು ಏಕೆ ಕಡಿಯಬಾರದು ಎಂಬ ಪಶುಸಂಗೋಪನ ಸಚಿವ ಕೆ.ವೆಂಕಟೇಶ್​ ಹೇಳಿಕೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ತಿರುಗೇಟು ನೀಡಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಅಲ್ಪಸಂಖ್ಯಾತರ ಓಲೈಕೆಯ ಉದ್ದೇಶ ಇಟ್ಟುಕೊಂಡು ಸಚಿವರು ಹೇಳಿಕೆ ನೀಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಈ ರೀತಿ ಹೇಳಿಕೆ ನೀಡುವುದು ಶೋಭೆ ತರಲ್ಲ ಎಂದರು.


ನೀವು ಶೇಕಡ ಇಪ್ಪತ್ತರಷ್ಟು ಇರುವ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದ್ದೀರಿ. ಶೇಕಡಾ 80ರಷ್ಟಿರುವ ಬಹುಸಂಖ್ಯಾತರ ಭಾವನೆಗಳ ಜೊತೆ ಚೆಲ್ಲಾಟವಾಡುವ ಕೆಲಸಕ್ಕೆ ಕೈ ಹಾಕಿದ್ದೀರಿ. ಚುನಾವಣೆಯಲ್ಲಿ ಗೆದ್ದಿದ್ದೀರಿ ಎಂದರೆ ಕರ್ನಾಟಕ ನಿಮಗೆ ಮಾರಾಟವಾಗಿದೆ ಎಂದರ್ಥವಲ್ಲ. ಗೆದ್ದ ತಕ್ಷಣ ಎಲ್ಲಾ ಬದಲಾವಣೆ ಮಾಡುತ್ತೇವೆ, ತುಷ್ಟಿಕರಣ ಮಾಡುತ್ತೇವೆ ಎಂದರೆ ಆಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

LEAVE A REPLY

Please enter your comment!
Please enter your name here