Home ಕರ್ನಾಟಕ ಕರಾವಳಿ ಫೆ. 24ರಂದು ಉಡುಪಿ ಕೂರ್ಮ ಫೌಂಡೇಶನ್ ವತಿಯಿಂದ ಆಜಾದ್ ಹಿಂದ್ ವಿಶೇಷ ಕಾರ್ಯಕ್ರಮ

ಫೆ. 24ರಂದು ಉಡುಪಿ ಕೂರ್ಮ ಫೌಂಡೇಶನ್ ವತಿಯಿಂದ ಆಜಾದ್ ಹಿಂದ್ ವಿಶೇಷ ಕಾರ್ಯಕ್ರಮ

0
ಫೆ. 24ರಂದು ಉಡುಪಿ ಕೂರ್ಮ ಫೌಂಡೇಶನ್ ವತಿಯಿಂದ ಆಜಾದ್ ಹಿಂದ್ ವಿಶೇಷ ಕಾರ್ಯಕ್ರಮ

ಉಡುಪಿ: ಉಡುಪಿಯ ಕೂರ್ಮ ಫೌಂಡೇಶನ್ ಆಶ್ರಯದಲ್ಲಿ ಫೆ.24ರಂದು ‘ಆಜಾದ್ ಹಿಂದ್ – ಶಿವಾಜಿಯಿಂದ ನೇತಾಜಿವರೆಗೆ’ ಕಾರ್ಯಕ್ರಮ ಉಡುಪಿ ಅಜ್ಜರಕಾಡು ಪುರಭವನದಲ್ಲಿ ಸಂಜೆ 5 ಗಂಟೆಯಿಂದ ನಡೆಯಲಿದೆ ಎಂದು ಕೂರ್ಮ ಫೌಂಡೇಶನ್ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ ಕಾರ್ಕಳ ತಿಳಿಸಿದ್ದಾರೆ.

ಈ‌ ಬಗ್ಗೆ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಜಾದ್ ಹಿಂದ್ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಮಹಾರಾಷ್ಟ್ರದ ಪ್ರಖ್ಯಾತ ವಾಗ್ಮಿ ಸಂದೀಪ್ ಮಹಿಂದ್ ಹಾಗೂ ರಾಷ್ಟ್ರೀಯವಾದಿ ಪತ್ರಕರ್ತರಾದ ಅಜಿತ್ ಹನುಮಕ್ಕನವರ್ ಅವರು ಭಾಗವಹಿಸಲಿದ್ದಾರೆ. ಗಾಯಕ ರಜತ್ ಮಯ್ಯ ಮತ್ತು ತಂಡದಿಂದ ರಾಷ್ಟ್ರಗೀತೆಗಳು ಸ್ವರಭಾರತಿ ಹಾಗೂ ಮಂಜರಿಚಂದ್ರ ಮತ್ತು ಕಲಾವಿದರಿಂದ ನೃತ್ಯರೂಪಕಗಳು ನಮೋ ನಮೋ ಭಾರತಾಂಬೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಛತ್ರಪತಿ ಶಿವಾಜಿ ಕಂಡ ಹಿಂದವಿ ಸ್ವರಾಜ್ಯದ ಜಾಗೃತಿಗಾಗಿ ಬದುಕನ್ನೇ ಸಮರ್ಪಿಸಿದ ಕ್ರಾಂತಿಕಾರಿ ಸಂತ ಡಾ. ಸಂದೀಪ್ ಮಹಿಂದ್ ಗುರೂಜಿ, ಹಿರಿಯ ಪತ್ರಕರ್ತ ಅಜಿತ್ ಹನುಮನಕ್ಕನವರ್ ಪ್ರಧಾನ ಭಾಷಣ ಮಾಡಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಆಜಾದ್ ಹಿಂದ್ ಕಾರ್ಯಕ್ರಮದ ಗೌರವಾಧ್ಯಕ್ಷ ಅಜಯ್ ಪಿ. ಶೆಟ್ಟಿ, ಕೂರ್ಮ ಫೌಂಡೇಶನ್ ಸಂಚಾಲಕ ಸೂರಜ್ ಕಿದಿಯೂರ್, ಕಾರ್ಯದರ್ಶಿ ಪ್ರವೀಣ್ ಯಕ್ಷಿಮಠ, ಕೋಶಾಧಿಕಾರಿ ಸುಜಿತ್ ಶೆಟ್ಟಿ ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here