Home ಕರ್ನಾಟಕ ಕರಾವಳಿ ಬಾರಾಡಿಬೀಡು ಕಂಬಳ; ಕೊಳಕ್ಕೆ ಇರ್ವತ್ತೂರು-ನಂದಳಿಕೆ ಜಿದ್ದಾಜಿದ್ದಿನ ಸ್ಪರ್ಧೆ

ಬಾರಾಡಿಬೀಡು ಕಂಬಳ; ಕೊಳಕ್ಕೆ ಇರ್ವತ್ತೂರು-ನಂದಳಿಕೆ ಜಿದ್ದಾಜಿದ್ದಿನ ಸ್ಪರ್ಧೆ

0
ಬಾರಾಡಿಬೀಡು ಕಂಬಳ; ಕೊಳಕ್ಕೆ ಇರ್ವತ್ತೂರು-ನಂದಳಿಕೆ ಜಿದ್ದಾಜಿದ್ದಿನ ಸ್ಪರ್ಧೆ

ಮಂಗಳೂರು: 37ನೇ ವರ್ಷದ ಕಾಂತಾವರ ಬಾರಾಡಿಬೀಡು “ಸೂರ್ಯ – ಚಂದ್ರ” ಜೋಡುಕರೆ ಭಾನುವಾರ ರಾತ್ರಿ ಸಮಾಪನಗೊಂಡಿದ್ದು, ಈ ಭಾರಿಯ ಸ್ಪರ್ಧೆ ಭಾರೀ ಕುತೂಹಲ ಮತ್ತು ಜಿದ್ದಾಜಿದ್ದಿಗೆ ಕಾರಣವಾಯಿತು.
ಕ್ವಾರ್ಟರ್ ಫೈನಲ್ ನಲ್ಲಿ ಕೊಳಕ್ಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್ ಅವರ ಕೋಣಗಳು ಮತ್ತು ನಂದಳಿಕೆ ಶ್ರೀಕಾಂತ್ ಭಟ್ ಅವರ ಕೋಣಗಳು ಸೆಮಿ ಫೈನಲ್ ತಲುಪುವ ಕ್ಷಣದಲ್ಲಿ ಸಮಾ-ಸಮಾ ಎನ್ನುವ ತೀರ್ಪು ಹೊರಬಿತ್ತು. ಅಂದರೆ ಆ ಸ್ಪರ್ಧೆಯಲ್ಲಿ ಆ ಎರಡೂ ಜತೆ ಕೋಣಗಳು ಸಮಾನವಾಗಿ 11.99 ಸೆಕೆಂಡಿನಲ್ಲಿ ಗುರಿ (ಮಂಜೊಟ್ಟಿ) ತಲುಪಿದ್ದವು. ಹೀಗಾಗಿ ಸಮಾ-ಸಮಾ ಎಂದು ಘೋಷಿಸಿ ತೀರ್ಪು ನೀಡಲಾಯಿತು.

ಆ ಬಳಿಕ ಕಂಬಳ ನಿಯಮದಂತೆ ಎರಡೂ ತಂಡಗಳಿಗೆ ಎರಡನೇ ಅವಕಾಶ ನೀಡಿ ಸ್ಪರ್ಧೆಗೆ ಇಳಿಸಲಾಯಿತು. ಎರಡೂ ಕಡೆಯವರೂ ತುದಿಗಲಾಲ್ಲಿ ನಿಂತು ನಮ್ಮ ಕೋಣವೇ ಮೊದಲು ಗುರಿ ಮುಟ್ಟಿತ್ತು ಅನ್ನುವಷ್ಟರಲ್ಲೇ ಮತ್ತೆ ಸಮಾ- ಸಮಾ ಎಂದು ತೀರ್ಪು ಹೊರಬಿತ್ತು. ಅಂದರೆ ಈ ಎರಡನೇ ಸ್ಪರ್ಧೆಯಲ್ಲಿಯೂ ಒಂದೇ ಸಮಯಕ್ಕೆ 11.80 ಸೆಕೆಂಡ್ ನಲ್ಲಿ ಆ ಕೋಣಗಳು ಗುರಿ ತಲುಪಿದ್ದವು. ಹೀಗಾಗಿ ಮತ್ತೆ ಸಮಾ-ಸಮಾ ಎಂದು ಘೋಷಿಸಿ ತೀರ್ಪು ನೀಡಲಾಯಿತು.

ಆ ಬಳಿಕ ಮೂರನೇ ಭಾರಿಗೇ ಸ್ಪರ್ಧೆಗೆ ಇಳಿದ ಅದೇ ತಂಡ‌ ಮತ್ತು ಕೋಣಗಳು ಓಡುವ ಕೊನೆಯ ಕ್ಷಣದವರೆಗೂ ಜಿದ್ದು ಏರ್ಪಟ್ಟಿತ್ತಾದರೂ ಕೊನೆ ಕ್ಷಣದಲ್ಲಿ 0.6 ಅಂತರದಲ್ಲಿ ಕೊಳಕ್ಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್ ಅವರ ಕೋಣಗಳು ಗೆದ್ದಿತ್ತು. ಆ ಮೂರನೇ ಸ್ಪರ್ಧೆಯಲ್ಲಿ ಭಾಸ್ಕರ ಕೋಟ್ಯಾನ್ ಅವರ ಕೋಣಗಳು 11.71 ಸೆಕೆಂಡ್ ನಲ್ಲಿ ಗುರಿ ತಲುಪಿದರೆ ನಂದಳಿಕೆ ಶ್ರೀಕಾಂತ್ ಭಟ್ರ ಕೋಣಗಳು 11.78 ಸೆಕೆಂಡ್ ನಲ್ಲಿ ಗುರಿ ತಲುಪಿತ್ತು.

ಫೈನಲ್ ನಲ್ಲಿಯೂ ಸಮಾ-ಸಮಾ

ಕ್ವಾರ್ಟರ್ ಫೈನಲ್ ನಲ್ಲಿ ಜಿದ್ದಾಜಿದ್ದಿ ನಡೆದು ಮೂರನೇ ಸುತ್ತಿನಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್‌ ಪ್ರವೇಶಿಸಿದ ಕೊಳಕ್ಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್ ಅವರ ಕೋಣಗಳು ಸೆಮಿಫೈನಲ್ಸ್ ನಲ್ಲಿ ಮಾಳ ಆನಂದ ನಿಲಯ ಶೇಖರ ಶೆಟ್ಟಿ ಅವರ ಕೋಣಗಳ ವಿರುದ್ಧ ಗೆಲುವು ಸಾಧಿಸಿತು. ಬಳಿಕ ಫೈನಲ್‌ನಲ್ಲಿ ಪದವು ಕಾನಡ್ಕ ಫ್ಲೇವಿ ಡಿಸೋಜ ಅವರ ಕೋಣಗಳೊಂದಿಗೆ ಸ್ಪರ್ಧೆ ನಡೆದ್ದಿದ್ದು, ಮೊದಲ ಸುತ್ತಿನಲ್ಲಿ 12.22 ಸೆಕೆಂಡ್ ನಲ್ಲಿ ಎರಡೂ ಜತೆ ಕೋಣಗಳು ಗುರಿ ತಲುಪಿತ್ತು. ಆ ಬಳಿಕ ಎರಡನೇ ಸುತ್ತಿನಲ್ಲಿ ಕೊಳಕ್ಕೆ ಇರ್ವತ್ತೂರು ಕೋಣಗಳು ಪದವು ಕಾನಡ್ಕದ ಕೋಣಗಳ ವಿರುದ್ದ ಗೆಲ್ಲುವ ಮೂಲಕ ಹಗ್ಗ ಹಿರಿಯ ವಿಭಾಗದಲ್ಲಿ ಪ್ರಥಮ‌ ಬಹುಮಾನಕ್ಕೆ ಸಾಕ್ಷಿಯಾದವು.

ಕಂಬಳ ಕೂಟದ ಫಲಿತಾoಶ

ಕಂಬಳ ಕೂಟದಲ್ಲಿ ಕನೆಹಲಗೆ: 4 ಜೊತೆ, ಅಡ್ಡಹಲಗೆ: 03 ಜೊತೆ, ಹಗ್ಗ ಹಿರಿಯ: 20 ಜೊತೆ, ನೇಗಿಲು ಹಿರಿಯ: 35 ಜೊತೆ, ಹಗ್ಗ ಕಿರಿಯ: 36 ಜೊತೆ, ನೇಗಿಲು ಕಿರಿಯ: 110 ಜೊತೆ, ಒಟ್ಟು ಕೋಣಗಳ ಸಂಖ್ಯೆ 208 ಜೊತೆ ಕೋಣಗಳು ಭಾಗವಹಿಸಿದ್ದವು.

ಕನೆಹಲಗೆ:
( ಸಮಾನ ಬಹುಮಾನ )

ನೇರಳೆಕಟ್ಟೆ ಕೊಡ್ಲಾಡಿ ಅದ್ವಿನ್ ರವಿರಾಜ್ ಶೆಟ್ಟಿ
ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ

ಬೇಲಾಡಿ ಬಾವ ಅಶೋಕ್ ಶೆಟ್ಟಿ
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ಅಡ್ಡ ಹಲಗೆ

ಬೋಳಾರ ತ್ರಿಶಾಲ್ ಕೆ. ಪೂಜಾರಿ
ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ

ನಿಡ್ಡೋಡಿ ಕಾನ ರಾಮ ಸುವರ್ಣ
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ಅಡ್ಡ ಹಲಗೆ:

ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ

ದ್ವಿತೀಯ: ಪೆರಿಯಾವು ಗುತ್ತು ಪ್ರಜ್ವಲ್ ಗಟ್ಟಿಯಾಳ್
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ಹಗ್ಗ ಹಿರಿಯ:

ಪ್ರಥಮ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ “ಎ”
ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್

ದ್ವಿತೀಯ: ಪದವು ಕಾನಡ್ಕ ಫ್ಲೇವಿ ಡಿಸೋಜ
ಓಡಿಸಿದವರು: ನತೀಶ್ ಬಾರಾಡಿ

ಹಗ್ಗ ಕಿರಿಯ:

ಪ್ರಥಮ: ಅಲ್ಲಿಪಾದೆ ದೇವಸ್ಯ ಪಡೂರು ವಿಜಯ ವಿ. ಕೋಟ್ಯಾನ್
ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ

ದ್ವಿತೀಯ: ಕುದ್ರಿಪದವು ಭಂಡಾರಮನೆ ಪ್ರೇಮ ಶೀನ ಗುರಿಕಾರ “ಎ”
ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ

ನೇಗಿಲು ಹಿರಿಯ:

ಪ್ರಥಮ: ಶ್ರೀ ವಿಷ್ಣುಮೂರ್ತಿ ದೇವತಾ ಬಿಳಿಯೂರು ಮೇಗಿನಮನೆ ಪ್ರಭಾಕರ ಗಣಪ ಭಂಡಾರಿ    ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ

ದ್ವಿತೀಯ: ಹೊಸ್ಮಾರ್ ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ
ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ

ನೇಗಿಲು ಕಿರಿಯ:

ಪ್ರಥಮ: ಜೈ ತುಳುನಾಡ್ ಕಕ್ಕೆಪದವು ಪುನ್ಕೆದಡಿ ರಾಮಯ್ಯ ಭಂಡಾರಿ
ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ

ದ್ವಿತೀಯ: ಮಿಯಾರ್ ಬೋರ್ಕಟ್ಟೆ ಅನುಗ್ರಹ ಪ್ರಥಮ್ ಪ್ರಭಾಕರ ಶೆಟ್ಟಿ
ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ

Photo credit: Wikipedia

 

LEAVE A REPLY

Please enter your comment!
Please enter your name here