
ಕಾಪು: ಕಾಪು ಶ್ರೀ ಮಾರಿಗುಡಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶದ ದಿವ್ಯ ಸಂದರ್ಭದಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ದ.ಕ ಸಂಸದ ಕ್ಯಾ.ಬ್ರಿಜೇಶ್ ಚೌಟ ಭೇಟಿ ನೀಡಿ ಅಮ್ಮನ ಆಶೀರ್ವಾದ ಪಡೆದುಕೊಂಡರು.
ಸೂರ್ಯಕುಮಾರ್ ಯಾದವ್ ಭೇಟಿ: ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಅವರು ಪತ್ನಿ ದೇವಿಶಾ ಶೆಟ್ಟಿ ಅವರೊಂದಿಗೆ ಕಾಪು ಮಾರಿಗುಡಿಗೆ ಭೇಟಿ ನೀಡಿ, ಆಶೀರ್ವಾದ ಪಡೆದರು. ಕಳೆದ ವರ್ಷ ದೇವಳಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ಮುಖಮಂಟಪದ ಚಿನ್ನದ ಸಿಂಹಾಸನ ಹಾಗೂ ಕಲ್ಲಿನ ಕಂಬಗಳಿಗೆ ದಾನ ನೀಡಿದ್ದರು.
ಬಳಿಕ ಮಾತನಾಡಿದ ಅವರು, ಕಾಪು ಅಮ್ಮನ ಸನ್ನಿಧಾನಕ್ಕೆ ಬರುವಾಗ ಏನೋ ಸೆಳೆತ ಉಂಟಾಗುತ್ತದೆ. ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸಿದ ಬಳಿಕ ದೇಶದ ಕ್ರಿಕೆಟ್ ತಂಡದ ನಾಯಕನಾಗುವ ಯೋಗ ಸಿಕ್ಕಿತು. ಅದಕ್ಕಾಗಿ ಅಮ್ಮನಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಇಂದಿನ ಕಾರ್ಯಕ್ರಮ: ಶಿವಮಹಿಮೆ ಕಿರು ನಾಟಕ, ನೃತ್ಯ ಸಂಗಮ, ಶನಿ ಮಹಾತ್ಮೆ ನಾಟಕ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಕಟಪಾಡಿ- ಪಡುಕುತ್ಯಾರಿನ ಶ್ರೀಕಾಳಹಸ್ತೇಂದ್ರ ಸ್ವಾಮೀಜಿ ಹಾಗೂ ಸೋಲೂರು ಮಹಾಸಂಸ್ಥಾನದ ಶ್ರಿವಿಖ್ಯಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಸಚಿವ ದಿನೇಶ್ ಗುಂಡುರಾವ್, ಬಿ.ಎಲ್. ಸಂತೋಷ್ ಮತ್ತಿತರ ಗಣ್ಯರು ಪಾಲ್ಗೊಳ್ಳುವರು.
