Home ಕರ್ನಾಟಕ ಕರಾವಳಿ ತಿಂಗಳೆ ಪ್ರತಿಷ್ಠಾನ: ಮಾ.6ರಿಂದ ದೈವಗಳ ನೇಮೋತ್ಸವ, 63ನೇ ಸಾಹಿತ್ಯೋತ್ಸವ ಹಾಗೂ ಗ್ರಾಮೋತ್ಸವ

ತಿಂಗಳೆ ಪ್ರತಿಷ್ಠಾನ: ಮಾ.6ರಿಂದ ದೈವಗಳ ನೇಮೋತ್ಸವ, 63ನೇ ಸಾಹಿತ್ಯೋತ್ಸವ ಹಾಗೂ ಗ್ರಾಮೋತ್ಸವ

0
ತಿಂಗಳೆ ಪ್ರತಿಷ್ಠಾನ: ಮಾ.6ರಿಂದ ದೈವಗಳ ನೇಮೋತ್ಸವ, 63ನೇ ಸಾಹಿತ್ಯೋತ್ಸವ ಹಾಗೂ ಗ್ರಾಮೋತ್ಸವ

ಉಡುಪಿ: ತಿಂಗಳೆ ಪ್ರತಿಷ್ಠಾನ ವತಿಯಿಂದ ಮಾರ್ಚ್ 6ರಿಂದ 8ರವರೆಗೆ ತಿಂಗಳೆಯಲ್ಲಿ ಧರ್ಮ ದೈವಗಳ ನೇಮೋತ್ಸವ, 63ನೇ ಸಾಹಿತ್ಯೋತ್ಸವ ಹಾಗೂ ನಾಡ್ಪಾಲು ಗ್ರಾಮೋತ್ಸವ ನಡೆಯಲಿದೆ.

ಈ ಬಗ್ಗೆ ತಿಂಗಳೆ ಪ್ರತಿಷ್ಠಾನದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ರು. ಮಾ.6ರಂದು ಬೆಳಿಗ್ಗೆ 9 ಗಂಟೆಗೆ ನಡೆಯುವ ಗ್ರಾಮೋತ್ಸವ ಕಾರ್ಯಕ್ರಮವನ್ನು ವಾದಿರಾಜ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಬಳಿಕ ಗ್ರಾಮೀಣ ಭಾಗದ ಕ್ರೀಡೆಗಳು ಹಾಗೂ ಜನಪದ ನೃತ್ಯ ಮತ್ತು ಹಾಡುಗಳ ಕಾರ್ಯಕ್ರಮ ಜರುಗಲಿದೆ. ಬೆಳಗ್ಗೆ 9.30 ಕ್ಕೆ ಕ್ರೀಡೋತ್ಸವ ಆರಂಭವಾಗೊಳ್ಳಲಿದ್ದು, ಸಂಜೆ 5 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಾ. 7ರಂದು ರಾತ್ರಿ‌ 7ಗಂಟೆಗೆ ಬ್ರಹ್ಮಬೈದರ್ಕಳ ಅಗಲುಸೇವೆ, ರಾತ್ರಿ 9ಗಂಟೆಗೆ ಕೊಡಮಣಿತ್ತಾಯ ನೇಮ ಹಾಗೂ ಕುಕ್ಕಿನಂತ್ತಾಯ ನೇಮೋತ್ಸವ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಅಪ್ಪಣ್ಣ ಹೆಗ್ಡೆಗೆ ತಿಂಗಳೆ ಪ್ರಶಸ್ತಿ:

ಅನಂತರ ಮಾ.8ರಂದು ಸಂಜೆ ನಡೆಯುವ ಸಾಹಿತ್ಯೋತ್ಸವದಲ್ಲಿ ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ ಅವರಿಗೆ ತಿಂಗಳೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವಾ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮಂಜುನಾಥ್ ಅಡಿಗ ಅವರಿಗೆ ಸೇವಾ ಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಸಂಜೆ 6 ಗಂಟೆಯಿಂದ ಆಳ್ವಾಸ್ ನೃತ್ಯ ವೈಭವ ಕಾರ್ಯಕ್ರಮ ನಡೆಯಲಿದೆ‌ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ, ತಿಂಗಳೆ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಕೆಳಚಾವಡಿ ಪ್ರಕಾಶ್ ಶೆಟ್ಟಿ, ನಿರ್ದೇಶಕರಾದ ಕಿರಣ್ ಕುಮಾರ್ ಬೈಲೂರು, ಸದಾನಂದ, ರಮೇಶ್ ಶೆಟ್ಟಿ ನಡ್ಪಾಲು ಗ್ರಾ.ಪಂ ಅಧ್ಯಕ್ಷ ನವೀನ್ ಕುಮಾರ್ ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here