
ಬಂಟ್ವಾಳ: ಒಣಹುಲ್ಲಿಗೆ ಬೆಂಕಿ ಕೊಡಲು ತೆರಳಿದ್ದ ದಂಪತಿ ಸಜೀವ ದಹನಗೊಂಡ ದಾರುಣ ಘಟನೆ ಬಂಟ್ವಾಳದ ಲೊರೆಟ್ಟೋ ಎಂಬಲ್ಲಿ ಇಂದು (ಜ.28) ನಡೆದಿದೆ.
ಕ್ರಿಸ್ಟಿನ್ ಕಾರ್ಲೋ (51) ಹಾಗೂ ಗಿಲ್ಬರ್ಟ್ ಕಾರ್ಲೋ(65) ಮೃತಪಟ್ಟ ದುರ್ದೈವಿಗಳು. ಮನೆ ಸಮೀಪದ ಒಣ ಹುಲ್ಲನ್ನು ತೆಗೆಯುವ ಉದ್ದೇಶದಿಂದ ಅದಕ್ಕೆ ಬೆಂಕಿ ಕೊಡಲು ತೆರಳಿದ್ರು. ಕ್ಷಣಾರ್ಧದಲ್ಲಿ ಬೆಂಕಿ ಜ್ವಾಲೆ ಹೆಚ್ಚಾಗಿದ್ದು, ಅವರನ್ನು ಆವರಿಸಿಕೊಂಡಿದೆ. ಈ ವೇಳೆ ತಪ್ಪಿಸಲು ಸಾಧ್ಯವಾಗದೇ ದಹನಗೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
