Home ಕರ್ನಾಟಕ ಕರಾವಳಿ ಮಂಗಳೂರು: ಡೆಂಗ್ಯು ಜ್ವರಕ್ಕೆ 31 ವರ್ಷದ ಯುವಕ ಬಲಿ

ಮಂಗಳೂರು: ಡೆಂಗ್ಯು ಜ್ವರಕ್ಕೆ 31 ವರ್ಷದ ಯುವಕ ಬಲಿ

0
ಮಂಗಳೂರು: ಡೆಂಗ್ಯು ಜ್ವರಕ್ಕೆ 31 ವರ್ಷದ ಯುವಕ ಬಲಿ

ಪುತ್ತೂರು: ಡೆಂಗ್ಯು ಜ್ವರದಿಂದ ಯುವಕನೋರ್ವ ಮೃತಪಟ್ಟ ಘಟನೆ ಕಡಬ ತಾಲೂಕಿನ‌ ಕುಟ್ರುಪಾಡಿಯಲ್ಲಿ ಸಂಭವಿಸಿದೆ.

ಮೃತಪಟ್ಟ ಯುವಕನನ್ನು ಶಿಜು (31) ಎಂದು ಗುರುತಿಸಲಾಗಿದೆ. ಜ್ವರ ಕಂಡುಬಂದ ಹಿನ್ನೆಲೆಯಲ್ಲಿ ಕಡಬದ ಆಸ್ಪತ್ರೆಗೆ ಯುವಕ‌ ಚಿಕಿತ್ಸೆಗಾಗಿ ತೆರಳಿದ್ದು, ಅಲ್ಲಿ ಡೆಂಗ್ಯು ಪತ್ತೆಯಾಗಿತ್ತು. ಆ ಬಳಿಕ ಮನೆಗೆ ವಾಪಾಸದ ಯುವಕನಿಗೆ ಜ್ವರ ಉಲ್ಬಣಗೊಂಡಿದೆ. ಹೀಗಾಗಿ ಮತ್ತೆ ಆಸ್ಪತ್ರೆಗೆ ತೆರಳಿದ ಯುವಕನಿಗೆ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ತೆರಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಆದರೆ ಆಸ್ಪತ್ರೆಗೆ ತೆರಳಿದಾಗ ಯುವಕ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

 

LEAVE A REPLY

Please enter your comment!
Please enter your name here