Home ಕರಾವಳಿ ನಾಪತ್ತೆಯಾಗಿದ್ದ ದಿಗಂತ್ ಉಡುಪಿಯಲ್ಲಿ ಪತ್ತೆ: ವಿಚಾರಣೆ ಪ್ರಾರಂಭ

ನಾಪತ್ತೆಯಾಗಿದ್ದ ದಿಗಂತ್ ಉಡುಪಿಯಲ್ಲಿ ಪತ್ತೆ: ವಿಚಾರಣೆ ಪ್ರಾರಂಭ

ಮಂಗಳೂರು: ಫರಂಗಿಪೇಟೆಯ ಕಿದೆಬೆಟ್ಟಿನ  ದಿಗಂತ್‌ ಹದಿಮೂರು ದಿನಗಳಿಂದ ನಾಪತ್ತೆಯಾಗಿದ್ದು, ಈ ಘಟನೆಯು ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಆದರೆ ನಾಪತ್ತೆಯಾಗಿದ್ದ ಬಾಲಕ ಇದೀಗ ಶನಿವಾರ ಉಡುಪಿಯಲ್ಲಿ ಸುರಕ್ಷಿತವಾಗಿ ಪತ್ತೆಯಾಗಿ ಆಶ್ಚರ್ಯಕ್ಕೆ ಕಾರಣನಾಗಿದ್ದಾನೆ. ನಾಪತ್ತೆಯ ಹಿಂದಿನ ಕಾರಣದ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ದೊರಕಿಲ್ಲ.

ನಾಪತ್ತೆಯಾಗಿದ್ದ  ದಿಗಂತ್ ಶನಿವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಉಡುಪಿಯಲ್ಲಿ ಪತ್ತೆಯಾಗಿದ್ದಾನೆ.ಈ ಬಗ್ಗೆ ಆತನ ಕುಟುಂಬಕ್ಕೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಉಡುಪಿಯಿಂದ ಆತ ಮನೆಯವರಿಗೆ ಕರೆ ಮಾಡಿ ತನ್ನನ್ನು ಯಾರೋ ಕರೆದೊಯ್ದಿದ್ದರು ಎಂದಿದ್ದ. ಆದರೆ ಪರೀಕ್ಷೆ ಭಯದಿಂದಲೇ ಓಡಿ ಹೋಗಿದ್ದೆ ಎಂದು ದಿಗಂತ್‌ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಫೆ. 25ರಂದು ನಾಪತ್ತೆಯಾಗಿದ್ದ ಈತ ಈವರೆಗೆ ಎಲ್ಲಿದ್ದ ಎಂಬ ಮಾಹಿತಿ ಲಭ್ಯವಾಗಬೇಕಿದೆ. ಈ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.

ದಿಗಂತ್‌ನನ್ನು ಮಂಗಳೂರಿಗೆ ಕರೆತಂದು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ)ಗೆ ಹಸ್ತಾಂತರಿಸಲಾಗಿದೆ. ಅವರ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸ್‌ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

 

 

 
Previous articleಉಡುಪಿ: ರಾಜ್ಯ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ದಿಢೀರ್ ಭೇಟಿ
Next articleಕೊಲ್ಲೂರು ಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿದ ತಮಿಳುನಾಡು ಸಿಎಂ ಪತ್ನಿ ದುರ್ಗಾ ಸ್ಟಾಲಿನ್