Home ಕರ್ನಾಟಕ ಕರಾವಳಿ ಹೊಸ ಮಾರಿಗುಡಿಯ ವೈಶಿಷ್ಟ್ಯಪೂರ್ಣ ಪ್ರತಿಷ್ಠಾ ಬ್ರಹ್ಮಕಲಶೋತ್ಸವದಿಂದ ನಾಡಿಗೆ ಮಂಗಳ: ಎಡನೀರು ಶ್ರೀ

ಹೊಸ ಮಾರಿಗುಡಿಯ ವೈಶಿಷ್ಟ್ಯಪೂರ್ಣ ಪ್ರತಿಷ್ಠಾ ಬ್ರಹ್ಮಕಲಶೋತ್ಸವದಿಂದ ನಾಡಿಗೆ ಮಂಗಳ: ಎಡನೀರು ಶ್ರೀ

0
ಹೊಸ ಮಾರಿಗುಡಿಯ ವೈಶಿಷ್ಟ್ಯಪೂರ್ಣ ಪ್ರತಿಷ್ಠಾ ಬ್ರಹ್ಮಕಲಶೋತ್ಸವದಿಂದ ನಾಡಿಗೆ ಮಂಗಳ: ಎಡನೀರು ಶ್ರೀ

ಕಾಪು: ದಕ್ಷಿಣ ಭಾರತದಲ್ಲೇ ಅತ್ಯಪೂರ್ವವೆಂಬಂತೆ ಕಾಪು ಹೊಸ ಮಾರಿಗುಡಿಯು ಅದ್ಭುತವಾಗಿ ಮೂಡಿಬಂದಿದೆ. ಭಕ್ತರ ಶಿಲಾಸೇವೆ ಸಹಿತ ವಿವಿಧ ಸೇವಾ ಕಾರ್ಯಗಳ ಮೂಲಕವಾಗಿ ಹೊಸತನಗಳೊಂದಿಗೆ ನಿರ್ಮಾಣಗೊಂಡಿರುವ ಮಾರಿಗುಡಿಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವದಲ್ಲೂ ವೈಶಿಷ್ಟ್ಯಗಳಿದ್ದು, ಇದರಿಂದ ನಾಡಿಗೆ ಮಂಗಳ ಉಂಟಾಗಲಿದೆ ಎಂದು ಶ್ರೀ ಎಡನೀರು ಜಗದ್ಗುರು ಶಂಕರಾಚಾರ್ಯ ಸಂಸ್ಥಾನಂ ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ಹಮ್ಮಿಕೊಂಡಿ ರುವ ನಾಲ್ಕನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು.

ಕೇಮಾರು ಶ್ರೀ ಶ್ರೀ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಮಾತನಾಡಿ, ಸಮಸ್ತ ಹಿಂದೂ ಸಮಾಜವನ್ನು ಜಾಗೃತಗೊಳಿಸುವಲ್ಲಿ ಕಾಪು ಮಾರಿಗುಡಿಯು ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಹೊಸ ಮಾರಿ ಗುಡಿಯ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಧಾರ್ಮಿಕ ಕಾರ್ಯ ಕ್ರಮಗಳಲ್ಲಿಯೂ ಸಮಷ್ಠಿಯ ಹಿತ ಕಾಯ್ದುಕೊಂಡು ಬರುವ ಮೂಲಕ ಶ್ರೇಷ್ಠತೆಯನ್ನು ಮೆರೆಯಲಾಗಿದೆ ಎಂದು ಅಭಿಪ್ರಾಯಪಟ್ಟರು.

ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದ ಮುಖ್ಯಸ್ಥ ಕಲ್ಲಡ್ಕ ಪ್ರಭಾಕರ ಭಟ್‌, ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು.

ಮಣಿಪಾಲ ಮಾಹೆಯ ಸಹಕುಲಾಧಿಪತಿ ಡಾ| ಎಚ್‌. ಎಸ್‌. ಬಲ್ಲಾಳ್‌, ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಎಸ್‌. ಶೆಟ್ಟಿ ಕಾಪು, ಕೊಡವೂರು ಶಿರಡಿ ಸಾಯಿಬಾಬಾ ಮಂದಿರದ ಆಡಳಿತ ಮೊಕ್ತೇಸರ ದಿವಾಕರ ಶೆಟ್ಟಿ ಕೊಡವೂರು, ಶಂಭು ಶೆಟ್ಟಿ ಉಡುಪಿ, ಮಸ್ಕತ್‌ ನ ಉದ್ಯಮಿ ದಿವಾಕರ್‌ ಶೆಟ್ಟಿ ಮಲ್ಲಾರು, ಕಾಪು ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅತಿಥಿಗಳಾಗಿ ಭಾಗವಹಿಸಿದರು.

ದಾನಿಗಳಾದ ಪುರುಷೋತ್ತಮ ಶೆಟ್ಟಿ ದಂಪತಿಗಳನ್ನು ಸನ್ಮಾನಿಸಲಾಯಿತು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸುಹಾಸ್‌ ಹೆಗ್ಡೆ ನಂದಳಿಕೆ ಉಪಸ್ಥಿತರಿದ್ದರು.

ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಯೋಗೀಶ್‌ ವಿ. ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಸಿದರು. ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿ, ಅಶೋಕ್‌ ಪಕಳ ವಂದಿಸಿದರು.

 

 

LEAVE A REPLY

Please enter your comment!
Please enter your name here