
ವಿಟ್ಲ: ಇಲ್ಲಿನ ಮಾಡತ್ತಡ್ಕದಲ್ಲಿರುವ ಕಲ್ಲಿನ ಕೋರೆಯಲ್ಲಿ ಸ್ಫೋಟಕ ಸ್ಫೋಟಗೊಂಡಿದ್ದರಿಂದ, ವಿಟ್ಲ ಸುತ್ತಮುತ್ತಲಿನ 3-4 ಕಿ.ಮೀ. ವ್ಯಾಪ್ತಿಯಲ್ಲಿ ಭಾರೀ ಸದ್ದುಂಟಾಗಿದೆ. ಮಂಗಳವಾರದಂದು ವಿಟ್ಲಮುಡ್ನೂರು ಗ್ರಾಮದ ಮಾಡತ್ತಡ್ಕದಲ್ಲಿ ಸದ್ದು ಕೇಳಿದ್ದು, ವಿಟ್ಲ ಪೇಟೆ, ವಿಟ್ಲಕಸಬಾ ಗ್ರಾಮ, ವಿಟ್ಲಮುಡ್ನೂರು ಗ್ರಾಮ, ಕಂಬಳಬೆಟ್ಟು, ಮೇಗಿನಪೇಟೆ, ಚಂದಳಿಕೆ ಪ್ರದೇಶದ ಜನರು ಆತಂಕಕ್ಕೊಳಗಾಗಿದ್ದಾರೆ.
ಸ್ಪೋಟಕ ಸ್ಪೋಟಿಸಿದ ಪ್ರಮಾಣಕ್ಕೆ ಕೆಲವು ಕಡೆ ಮನೆಗಳಲ್ಲಿ ಬಿರುಕು ಉಂಟಾಗಿದೆ. ಮಾಡಿನ ಹಂಚು, ಶೀಟುಗಳು ಪುಡಿಯಾಗಿ ಬಿದ್ದಿವೆ. ಆದರೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.
