
ಮಂಗಳೂರು: ಮಂಗಳೂರಿನಿಂದ ಅಬುಧಾಬಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಗುಡ್‌ನ್ಯೂಸ್ ನೀಡಿದ್ದು, ಜುಲೈ 22ರಿಂದ ದಿನನಿತ್ಯವೂ ಅಬುಧಾಬಿಗೆ ವಿಮಾನ ಸಂಚಾರ ನಡೆಸಲಿದೆ ಎಂದು ಹೇಳಿದೆ.
ಹೌದು, ಈ ಹಿಂದೆ ವಾರದಲ್ಲಿ ಕೇವಲ ನಾಲ್ಕೇ ದಿನ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಬುಧಾಬಿಗೆ ವಿಮಾನ ಸಂಚಾರ ಇರುತ್ತಿತ್ತು. ಇದೀಗ ಅಬುಧಾಬಿಗೆ ಸಂಚರಿಸುವ ವಿಮಾನಗಳ ಸಂಖ್ಯೆಯನ್ನ ಹೆಚ್ಚಿಸಲು ಏರ್ ಇಂಡಿಯಾ ಎಕ್ಸ್‌ಪ್ರೆಸ್ ನಿರ್ಧರಿಸಿದ್ದು, ಆ ಪ್ರಕಾರವಾಗಿ ವಾರ ಪೂರ್ತಿ ಅಬುಧಾಬಿಗೆ ವಿಮಾನ ಸಂಚರಿಸಲಿವೆ ಎನ್ನಲಾಗಿದೆ. ಜುಲೈ 22ರಿಂದಲೇ ಈ ಸೇವೆ ಆರಂಭವಾಗಲಿದ್ದು, ಇನ್ಮುಂದೆ ಮಂಗಳೂರಿನಿಂದ ಅಬುಧಾಬಿಗೆ ತೆರಳುವವರಿಗೆ ಪ್ರತಿ ದಿನವೂ ವಿಮಾನ ಸೌಲಭ್ಯ ದೊರಕಲಿದೆ.
ಸದ್ಯ, ಇಂಡಿಗೋ 4 ಮತ್ತು ಏರ್‌ಇಂಡಿಯಾ ಎಕ್ಸ್‌ಪ್ರೆಸ್ 1 ವಿಮಾನ ಸೇರಿ ಒಟ್ಟು 5 ವಿಮಾನಗಳು ಮಂಗಳೂರು-ಬೆಂಗಳೂರು ನಡುವೆ ಸಂಚರಿಸುತ್ತಿವೆ. ಜುಲೈ 22ರಿಂದ ಆ ಸಂಖ್ಯೆ 7ಕ್ಕೆ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.
