
ಉಡುಪಿ: ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದ ಸಮೀಪ ಇರುವ ಹೋಟೆಲ್ ಮಥುರ ಗೋಕುಲ್ ನಲ್ಲಿ ‘ಉಡುಪಿ ಸಂಸ್ಕೃತಿ’ ಕೈಮಗ್ಗ ಹಾಗೂ ಕರಕುಶಲ ಮೇಳ ಜರುಗಲಿದೆ.
ಮೇಳವು ಫೆಬ್ರವರಿ 19ರಂದು ಉದ್ಘಾಟನೆಗೊಳ್ಳಲಿದ್ದು, ಕೈಮಗ್ಗ ಸಹಿತ ಕರಕುಶಲ ಮತ್ತು ಸಾಂಪ್ರದಾಯಿಕ ಉದ್ಯಮಗಳನ್ನು ಪರಿಚಯಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಡೆಯಲಿರುವುದು.
ಕೈಮಗ್ಗ ನೇಕಾರರು ಮತ್ತು ಕರಕುಶಲಕರ್ಮಿಗಳಿಂದ ಸಿದ್ದಪಡಿಸಲಾದ ಸೀರೆ, ಶಾಲು, ಕುರ್ತಾ, ಖಾದಿ ಉಡುಪುಗಳು, ಸೌಂದರ್ಯ ವರ್ಧಕಗಳು, ಚನ್ನಪಟ್ಟಣ ಆಟಿಕೆಗಳು, ಸಾಂಬಾರ ಪದಾರ್ಥಗಳು, ಎಕ್ಕದ ಎಣ್ಣೆ, ಒಣ ಹಣ್ಣು, ಓಲೆ ಬೆಲ್ಲ, ಗೋವಿನ ಉತ್ಪನ್ನಗಳು, ಚಿತ್ರಕಲೆ, ಸಾವಯವ ಉತ್ಪನ್ನಗಳು, ತರಕಾರಿ ಧಾನ್ಯ ಹಾಗೂ ಮಣ್ಣಿನ ಉತ್ಪನ್ನಗಳು ಲಭ್ಯ ಇರಲಿವೆ ಎಂದು ಪ್ರಕಟಣೆ ತಿಳಿಸಿದೆ.
