Home ಕರ್ನಾಟಕ ಕರಾವಳಿ ಗುರುಪುರ: ಹಿಂದೂ ರುದ್ರಭೂಮಿ ಮುಕ್ತಿಧಾಮ ಉದ್ಘಾಟನೆ

ಗುರುಪುರ: ಹಿಂದೂ ರುದ್ರಭೂಮಿ ಮುಕ್ತಿಧಾಮ ಉದ್ಘಾಟನೆ

0
ಗುರುಪುರ: ಹಿಂದೂ ರುದ್ರಭೂಮಿ ಮುಕ್ತಿಧಾಮ ಉದ್ಘಾಟನೆ

ಮಂಗಳೂರು: ಗುರುಪುರದ ಅಲೈಗುಡ್ಡೆಯಲ್ಲಿ ನವೀಕರಿಸಲಾದ ಹಿಂದೂ ರುದ್ರಭೂಮಿ ಮುಕ್ತಿಧಾಮ’ ವನ್ನು ರವಿವಾರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ ಉದ್ಘಾಟಿಸಿದರು.

ಈ ಸೇವಾ ಕಾರ್ಯದಲ್ಲಿ ಕೈಜೋಡಿಸಿರುವ ಪಂಚಾಯತ್ ಮತ್ತು ಊರಿನವರ ಶ್ರಮವನ್ನು ಶಾಸಕರು ಈ ಸಂದರ್ಭದಲ್ಲಿ ಅಭಿನಂದಿಸಿದರು.

ಈ‌ ಸಂದರ್ಭದಲ್ಲಿ ದಾನಿಗಳಲ್ಲೊಬ್ಬರಾದ ಲಕ್ಷ್ಮಣ ಶೆಟ್ಟಿ, ಗುರುಪುರ ಪಂಚಾಯತ್ ಅಧ್ಯಕ್ಷೆ ಸಫರಾ ಎನ್, ನಿರ್ವಹಣಾ ಸಮಿತಿ ಅಧ್ಯಕ್ಷ ವಿಷ್ಣು ಕಾಮತ್, ರುದ್ರಭೂಮಿ ಸಮಿತಿ ಕಾರ್ಯದರ್ಶಿ ಪಾಂಡುರ೦ಗ ಕಾಮತ್, ಪಂಚಾಯತ್ ಸದಸ್ಯರಾದ ಜಿ. ಎಂ. ಉದಯ ಭಟ್, ರಾಜೇಶ್ ಸುವರ್ಣ, ಯಶವಂತ ಶೆಟ್ಟಿ, ಸಚಿನ್ ಅಡಪ, ಹೋಟೆಲ್ ಉದ್ಯಮಿ ಸುಧೀರ್ ಕಾಮತ್, ಹಾಗೂ ಪಂಚಾಯತ್ ಸದಸ್ಯರು,ಬಿಜೆಪಿ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here