
ಬೆಂಗಳೂರು: ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ಶ್ರೀಪಾದರ ವಿಶ್ವಪರ್ಯಾಯದ ಆಮಂತ್ರಣವನ್ನು ದೇಶದ ಪ್ರಧಾನಿಗಳಾದ ನರೇಂದ್ರ ಮೋದಿಯವರಿಗೆ ಇಂದು ಆಂಧ್ರದ ಲೇಪಾಕ್ಷಿಯಲ್ಲಿ ನೀಡಲಾಯಿತು.
ಶ್ರೀಮಠದ ಶಿಷ್ಯರಾದ ತಿರುಪತಿಯ ಶ್ರೀವೇಂಕಟೇಶ ಹೆಚ್.ಎಸ್ ಅವರು ಮೋದಿ ಅವರಿಗೆ ನೀಡಿದರು. ಹದಿನಾಲ್ಕು ವರ್ಷಗಳ ಹಿಂದೆ ಶ್ರೀಗಳನ್ನು ಭೇಟಿ ಮಾಡಿದ್ದನ್ನು ನೆನಪಿಸಿಕೊಂಡು ಪರ್ಯಾಯ ಸಂಭ್ರಮಕ್ಕೆ ಅಭಿನಂದನೆಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಅತ್ಯಂತ ಗೌರವ ಹಾಗೂ ಸಂತೋಷದಿಂದ ಶ್ರೀಮಠದ ಆಮಂತ್ರಣ ಪತ್ರಿಕೆಯನ್ನು ಸ್ವೀಕರಿಸಿ, ಸಂದೇಶವನ್ನು ಕಳಿಸುವುದಾಗಿ ತಿಳಿಸಿದರು.
