Home ಕರ್ನಾಟಕ ಕರಾವಳಿ ಮಾರ್ಚ್‌ 5 ರಂದು ಕಾಪು ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ; ಫೆ. 22-23 ರಂದು ಹೊರೆಕಾಣಿಕೆ ಸಮರ್ಪಣೆ

ಮಾರ್ಚ್‌ 5 ರಂದು ಕಾಪು ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ; ಫೆ. 22-23 ರಂದು ಹೊರೆಕಾಣಿಕೆ ಸಮರ್ಪಣೆ

0
ಮಾರ್ಚ್‌ 5 ರಂದು ಕಾಪು ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ; ಫೆ. 22-23 ರಂದು ಹೊರೆಕಾಣಿಕೆ ಸಮರ್ಪಣೆ

ಕಾಪು: ಇಲ್ಲಿನ ಇತಿಹಾಸ ಪ್ರಸಿದ್ದ ಕಾಪುದಪ್ಪೆಯ ಹೊಸ ಮಾರಿಗುಡಿಯ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಫೆ. 25 ರಿಂದ ಮಾರ್ಚ್‌ 5ರವರೆಗೆ ನಡೆಯಲಿದೆ.

ಬ್ರಹ್ಮಕಲಶೋತ್ಸವದ ಅಂತಿಮ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಕಾಪು ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ, ವ್ಯವಸ್ಥಾಪನಾ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿಯ ಜೊತೆಗೆ ಇತರ ಸಮಿತಿಗಳು ಕಾರ್ಯಕ್ರಮಗಳನ್ನು ಸುಸೂತ್ರವಾಗಿ ನಡೆದುವ ಹೊಣೆ ಹೊತ್ತಿವೆ. ಜೊತೆಗೆ ಉಡುಪಿ ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಪುರಸಭೆಯೂ ತಮ್ಮ ಸಹಯೋಗವನ್ನು ನೀಡುತ್ತಿವೆ.

ಬ್ರಹ್ಮಕಲಶೋತ್ಸವದ ಕಾರ್ಯಕ್ರಮಗಳು ಇಂತಿವೆ:

ಫೆ. 14 ರಂದು ಗಂಗಾಜಲ ಆಗಮನ
ಫೆ. 22 ರಂದು ದ.ಕನ್ನಡ ಭಾಗದಿಂದ ದಕ್ಷಿಣ ವಾಹಿನಿ ಹೊರೆಕಾಣಿಕೆ
ಫೆ. 23 ರಂದು ಉಡುಪಿ ಜಿಲ್ಲೆಯಿಂದ ಉತ್ತರವಾಹಿನಿ ಹೊರೆಕಾಣಿಕೆ
ಫೆ. 25 ರಂದು ಬ್ರಹ್ಮಕಲಶೋತ್ಸವ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ
ಫೆ.25 ರಿಂದ ಮಾ.5 ರವರೆಗೆವಿವಿಧ ಶಾಶ್ವತ ಯೋಜನೆಗಳ ಸಮರ್ಪಣೆ
ಮಾ. 2 ರಂದು ಗದ್ದುಗೆ ಪ್ರತಿಷ್ಠೆ
ಮಾ. 5 ರಂದು ಬ್ರಹ್ಮ ಕಲಶೋತ್ಸವ

ಪ್ರತಿ ದಿನ ಮಧ್ಯಾಹ್ನ ಮತ್ತು ರಾತ್ರಿ ಅನ್ನ ಸಂತರ್ಪಣೆ, ಸಂಜೆ ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಕಾಪುದಪ್ಪೆ ಮಾರಿಯಮ್ಮನ ಬ್ರಹ್ಮಕಲಶೋತ್ಸವ ನಿಮಿತ್ತ ನಗರವನ್ನು ಮದುವಣಗಿತ್ತಿಯಂತೆ ಸಿಂಗರಿಸಲು ಮತ್ತು ಭಕ್ತರಿಗಾಗಿ ಸೌಲಭ್ಯಗಳನ್ನು ಏರ್ಪಡಿಸಲು ಆಡಳಿತ ಮಂಡಳಿ, ಸಮಿತಿಗಳು ಹಾಗೂ ಜಿಲ್ಲಾಡಳಿತವು ಸಜ್ಜಾಗಿದೆ.

 

 

LEAVE A REPLY

Please enter your comment!
Please enter your name here