
ಉಡುಪಿ: ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರ ಪರ್ಯಾಯೋತ್ಸವದ ಪ್ರಯುಕ್ತ ಮಂಗಳೂರಿನ ಕುದ್ರೋಳಿ ಗಣೇಶ್ ಮತ್ತು ಬಳಗದವರಿಂದ ವಿಸ್ಮಯ ಜಾದೂ ಪ್ರದರ್ಶನ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಬುಧವಾರ ರಾತ್ರಿ ನೆರವೇರಿತು.
ಕುದ್ರೋಳಿ ಗಣೇಶ್ ಅವರು ಹತ್ತಾರು ವಿಸ್ಮಯ ಜಾದೂ ಹಾಗೂ ಕೆಲವು ಸಮಾಜಕ್ಕೆ ಸಂದೇಶ ನೀಡುವಂಥ ಜಾದೂ ಪ್ರದರ್ಶನದ ಮಾಡುವ ಮೂಲಕ ನೆರೆದಿದ್ದ ಜನತೆಯನ್ನು ಮೂಗಿನ ಮೇಲೆ ಬೆರಳಿಟ್ಟು ನೋಡುವಂತೆ ಮಾಡಿದರು.
ಬುಧವಾರದ ವಿಸ್ಮಯ ಜಾದೂ ಕಾರ್ಯಕ್ರಮ ವೀಕ್ಷಿಸಲು ಸಾವಿರಾರು ಮಂದಿ ಸೇರಿದ್ದು, ರಾಜಾಂಗಣ ಭರ್ತಿಯಾಗಿತ್ತು. ಪರ್ಯಾಯ ಪುತ್ತಿಗೆ ಶ್ರೀ ಗಳು ಸಹಿತ ನೂರಾರು ಗಣ್ಯರು ವಿಸ್ಮಯ ಜಾದು ವೀಕ್ಷಿಸಿದರು.
