Home ಕರ್ನಾಟಕ ಕರಾವಳಿ ಫೆ. 17ರಂದು ಉಡುಪಿಯಿಂದ ಪ್ರಯಾಗರಾಜ್ ಗೆ ಮಹಾಕುಂಭ ವಿಶೇಷ ರೈಲು: ಕೋಟ ಶ್ರೀನಿವಾಸ್ ಪೂಜಾರಿ

ಫೆ. 17ರಂದು ಉಡುಪಿಯಿಂದ ಪ್ರಯಾಗರಾಜ್ ಗೆ ಮಹಾಕುಂಭ ವಿಶೇಷ ರೈಲು: ಕೋಟ ಶ್ರೀನಿವಾಸ್ ಪೂಜಾರಿ

0
ಫೆ. 17ರಂದು ಉಡುಪಿಯಿಂದ ಪ್ರಯಾಗರಾಜ್ ಗೆ ಮಹಾಕುಂಭ ವಿಶೇಷ ರೈಲು: ಕೋಟ ಶ್ರೀನಿವಾಸ್ ಪೂಜಾರಿ

ಉಡುಪಿ: ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಭೇಟಿ ನೀಡಬೇಕು ಎಂದು ಬಯಸುವವರಿಗೆ ಸಿಹಿ ಸುದ್ದಿ. ಫೆ. 17ರಂದು ಮಧ್ಯಾಹ್ನ 12.30 ಗಂಟೆಗೆ ಉಡುಪಿಯಿಂದ ಕುಂಭಮೇಳಕ್ಕೆ ತೆರಳಲು ರೈಲು ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಮಾಹಿತಿ ನೀಡಿದ್ದಾರೆ.

ರೈಲು ನಂಬ್ರ 01192 ಮಹಾಕುಂಭ ವಿಶೇಷ ರೈಲು ಪ್ರಯಾಗರಾಜ್ ಗೆ ತೆರಳಲಿದೆ. ರೈಲು ನಂಬ್ರ: 01191 ದಿನಾಂಕ 20/2/2025 ಗುರುವಾರದಂದು ಮರಳಲಿದೆ.

Image

ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಂಸದ, ” ಉತ್ತರ ಪ್ರದೇಶದ ಪ್ರಯಾಗ್‌ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ವಿಶೇಷ ರೈಲು ಒದಗಿಸುವಂತೆ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ರವರಲ್ಲಿ ಮನವಿ ಮಾಡಿದ್ದು ಇದೀಗ ಅಧಿಕೃತ ಪ್ರಕಟಣೆಯನ್ನು ರೈಲ್ವೆ ಇಲಾಖೆ ಪ್ರಕಟಿಸಿದೆ. ಫೆ. 17ರಂದು ಮಧ್ಯಾಹ್ನ 12.30 ಗಂಟೆಗೆ ಉಡುಪಿಯಿಂದ ಹೊರಟು ಕುಂಭಮೇಳದತ್ತ ಪ್ರಯಾಣ ಬೆಳೆಸಲಿದೆ” ಎಂದು ಬರೆದಿದ್ದಾರೆ.

“ನನ್ನ ಮನವಿಯನ್ನು ಪುರಸ್ಕರಿಸಿದ ಕೇಂದ್ರ ರೈಲ್ವೆ ಇಲಾಖೆಯ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ
ವಿಶೇಷ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಫೆ.14ರಂದು ಬೆಳಿಗ್ಗೆಯಿಂದ ಟಿಕೆಟ್ ಲಭ್ಯವಿದ್ದು ರೈಲ್ವೆ ಇಲಾಖೆಯ ವೆಬ್‌ಸೈಟ್ ಅಥವಾ ಆಯಾ ರೈಲು ನಿಲ್ದಾಣಗಳ ಟಿಕೆಟ್ ಕೌಂಟರ್‌ನಲ್ಲಿ ಟಿಕೆಟ್ ಪಡೆದುಕೊಳ್ಳಬಹುದಾಗಿದೆ” ಎಂದು ಮಾಹಿತಿ ನೀಡಿದ್ದಾರೆ.

 

  • Beta

Beta feature

 

LEAVE A REPLY

Please enter your comment!
Please enter your name here