
ಉಡುಪಿ: ಕೆಂಡ ಸೇವೆ ವೇಳೆ ಬೆಂಕಿಗೆ ಬಿದ್ದು ಅಯ್ಯಪ್ಪ ಮಾಲಾಧಾರಿಯೊಬ್ಬರು ತೀವ್ರ ಗಾಯಗೊಂಡ ಘಟನೆ
ಉಡುಪಿಯ ಮಲ್ಪೆಯಲ್ಲಿ ನಡೆದಿದೆ. ಅಯ್ಯಪ್ಪ ಮಂದಿರದ ವಾರ್ಷಿಕೋತ್ಸವ ನಡೆಯುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಗಾಯಾಳು ಮಾಲಾಧಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕರಾವಳಿಯಲ್ಲಿ ಸಾಂಪ್ರದಾಯಿಕವಾಗಿ ಅಯ್ಯಪ್ಪ ಮಾಲಾಧಾರಿಗಳ ಕೆಂಡ ಸೇವೆ ನಡೆಯುತ್ತದೆ. ಅದರಂತೆ ಕೆಂಡಕ್ಕೆ ಹಾರುವ ವೇಳೆ ಅಯ್ಯಪ್ಪ ಮಾಲಾಧಾರಿ ಆಯತಪ್ಪಿ ಬೆಂಕಿಗೆ ಬಿದ್ದಿದ್ದಾರೆ. ಕೂಡಲೇ ಇತರೆ ಮಾಲಾಧಾರಿಗಳು ಇವರ ಸಹಾಯಕ್ಕೆ ಬಂದಿದ್ದಾರೆ. ಈ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಮಾಲಾಧಾರಿ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
