
ಉಡುಪಿ: 25 ವರ್ಷಗಳಿಂದ ಪುರಾತನ ರೈಲ್ವೆ ಬೋಗಿಗಳಲ್ಲಿ ಸಂಚರಿಸುತ್ತಿದ್ದ ಕರಾವಳಿಯ ಪ್ರಯಾಣಿಕರಿಗೆ ಇನ್ನು ಮುಂದೆ ಜರ್ಮನ್ ತಂತ್ರಜ್ಞಾನದ ಎಲ್‌ಹೆಚ್‌ಬಿ ಕೋಚ್ ನಲ್ಲಿ ಪ್ರಯಾಣಿಸುವ ಭಾಗ್ಯ ಸಿಗಲಿದೆ.
ಈ ಬಗ್ಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಮಾಹಿತಿ ನೀಡಿದ್ದಾರೆ. ಎಕ್ಸ್ ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, ” ಈ ಸಿಹಿಸುದ್ಧಿಯನ್ನು ಪ್ರಕಟಿಸಲು ಸಂತಸಪಡುತ್ತೇನೆ. ಕರಾವಳಿ ಕರ್ನಾಟಕ ಹಾಗೂ ಮುಂಬೈ ಪ್ರಯಾಣಿಕರ ಭಾವನಾತ್ಮಕ ಸಂಬಂಧವನ್ನು ಹೊಂದಿರುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲು ಅತ್ಯಾಧುನಿಕ ಜರ್ಮನ್ ತಂತ್ರಜ್ಞಾನದ ಮೂಲಕ ಎಲ್‌ಹೆಚ್‌ಬಿ ಕೋಚ್‌ಗಳನ್ನೊಳಗೊಂಡು ಫೆಬ್ರವರಿ 17ಕ್ಕೆ ಪ್ರಥಮ ಪ್ರಯಾಣವನ್ನು ಬೆಳೆಸಲಿದೆ. ಉಡುಪಿ ರೈಲ್ವೆ ನಿಲ್ದಾಣದಲ್ಲಿ ಸ್ವಾಗತಿಸೋಣ ಬನ್ನಿ” ಎಂದಿದ್ದಾರೆ.
ತುಳುವರಿಗೆ ತುಳುನಾಡು ಮಾತೃಭೂಮಿಯಾದರೆ ಮುಂಬೈ ಕರ್ಮಭೂಮಿಯಾಗಿದ್ದು, ಮತ್ಯ್ಸಗಂಧ ರೈಲು ಮಾತೃಭೂಮಿಯನ್ನು ಕರ್ಮಭೂಮಿಗೆ ಬೆಸೆಯುವ ಕೊಂಡಿಯಾಗಿದೆ. ಇದೀಗ ಅತ್ಯಾಧುನಿಕ ಬೋಗಿಗಳಿಂದ ಸುಸಜ್ಜಿತ ರೈಲಿನ ಸುದ್ದಿ ತುಳುವರಲ್ಲಿ ಹರ್ಷವನ್ನು ಹೆಚ್ಚಿಸಿದೆ. ಮುಂಬೈಯನ್ನು ತುಳುನಾಡಿಗೆ ಬೆಸೆದ ದಿ.ಜಾರ್ಜ್ ಫೆರ್ನಾಂಡೀಸ್ ಅವರ ದೂರದರ್ಶಿತ್ವವನ್ನು ತುಳುವರು ಸ್ಮರಿಸುತ್ತಿದ್ದಾರೆ.
Beta feature
