Home ಕರಾವಳಿ ಕೊಲ್ಲೂರು ಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿದ ತಮಿಳುನಾಡು ಸಿಎಂ ಪತ್ನಿ ದುರ್ಗಾ ಸ್ಟಾಲಿನ್

ಕೊಲ್ಲೂರು ಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿದ ತಮಿಳುನಾಡು ಸಿಎಂ ಪತ್ನಿ ದುರ್ಗಾ ಸ್ಟಾಲಿನ್

ಉಡುಪಿ: ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಪತ್ನಿ ದುರ್ಗಾ ಸ್ಟಾಲಿನ್ ಪುರಾಣ ಪ್ರಸಿದ್ಧ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಪತಿ ಸಿಎಂ ಎಂಕೆ ಸ್ಟಾಲಿನ್ ಮತ್ತು ಮಗ ಉದಯನಿಧಿ ಸ್ಟಾಲಿನ್ ಸನಾತನ ಧರ್ಮ ವಿರೋಧೀ ಹೇಳಿಕೆ ನೀಡುತ್ತಿದ್ದರೆ ದುರ್ಗಾ ಸ್ಟಾಲಿನ್ ದೇಗುಲಕ್ಕೆ ಭೇಟಿ ನೀಡಿದ್ದು ಅಚ್ಚರಿಗೆ ಕಾರಣವಾಗಿದೆ.

ಶುಕ್ರವಾರ ತಮ್ಮ ಸ್ನೇಹಿತೆಯರ ಜೊತೆ ದೇಗುಲಕ್ಕೆ ಬಂರಿರುವ ದುರ್ಗಾ ಸ್ಟಾಲಿನ್, ಕೊಲ್ಲೂರು ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಈ ವೇಳೆ ದುರ್ಗಾ ಸ್ಟಾಲಿನ್ ಅವರ ಜೊತೆಗೆ ಬಂದಿದ್ದ ಸ್ನೇಹಿತೆಯೊಬ್ಬರು ಮೂಕಾಂಬಿಕೆಗೆ ಹರಕೆ ರೂಪದಲ್ಲಿ ಚಿನ್ನದ ಕಿರೀಟ ಅರ್ಪಣೆ ಮಾಡಿದ್ದಾರೆ. ಖಾಸಗಿಯಾಗಿ ದೇವಿಗೆ ಕಿರೀಟ ಅರ್ಪಿಸಿ ಆಶೀರ್ವಾದ ಪಡೆದು, ದುರ್ಗಾ ಸ್ಟಾಲಿನ್ ಹಾಗೂ ಗೆಳತಿಯರು ತೆರಳಿದ್ದಾರೆ. ಈ ವೇಳೆ ದೇಗುಲದ ವತಿಯಿಂದ ತಮಿಳುನಾಡು ಸಿಎಂ ಪತ್ನಿಗೆ ಗೌರವ ಸಲ್ಲಿಸಲಾಗಿದೆ.

 

 
Previous articleನಾಪತ್ತೆಯಾಗಿದ್ದ ದಿಗಂತ್ ಉಡುಪಿಯಲ್ಲಿ ಪತ್ತೆ: ವಿಚಾರಣೆ ಪ್ರಾರಂಭ
Next articleಬಬ್ಬುಸ್ವಾಮಿ ದೈವಸ್ಥಾನದಲ್ಲಿ ಸಿರಿಸಿಂಗಾರದ ನೇಮ