
ಸುಬ್ರಮಣ್ಯ; ಕೊಂಬಾರಿನಲ್ಲಿ ನಕ್ಸಲರು ಮನೆಯೊಂದರಲ್ಲಿ ಊಟ ಮಾಡಿ, ದಿನಸಿ ಸಾಮಾಗ್ರಿ ಪಡೆದು ಹಿಂತಿರುಗಿದ್ದಾರೆ ಎಂದು ತಿಳಿದು ಬಂದಿದೆ.
ಕೊಂಬಾರು ಗ್ರಾಮದ ಚೇರು ಪ್ರದೇಶದ ಮನೆಯೊಂದಕ್ಕೆ ಗುರುವಾರ ಸಂಜೆ ಏಳು ಗಂಟೆ ವೇಳೆ ತಂಡ ಮನೆಗೆ ಆಗಮಿಸಿ ಊಟ ಮಾಡಿ ಸುಮಾರು ಒಂಬತ್ತು ಗಂಟೆ ವೇಳೆ ಅಲ್ಲೇ ಇದ್ದು ದಿನಸಿ ಸಾಮಾಗ್ರಿಗಳನ್ನು ಪಡೆದು ತೆರಳಿದ್ದಾರೆ ಎಂದು ಮಾಹಿತಿ ಲಭಿಸಿದೆ.
ಈ ಮಾಹಿತಿ ಇಲಾಖೆಗೆ ಲಭ್ಯವಾಗುತ್ತಲೇ ನಕ್ಸಲ್ ನಿಗ್ರಹ ಪಡೆ, ಪೊಲೀಸರು ಮಾಹಿತಿ ಕಲೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಎಎನ್‌ಎಫ್ ತಂಡ ಮನೆಗೆ ಭೇಟಿ ನೀಡಲಾದ ಆಸು-ಪಾಸು ಪರಿಸರದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಶಂಕಿತರು ಅದೇ ಪರಿಸರಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದತ್ತ ತೆರಳಿರುತ್ತಾರೆಂದು ಶಂಕಿಸಲಾಗಿದೆ.
