Home ಕರ್ನಾಟಕ ಕರಾವಳಿ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿ ರಚನೆ

ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿ ರಚನೆ

0
ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿ ರಚನೆ

ಕಾರ್ಕಳ: ಕಾರ್ಕಳ ಕ್ಷೇತ್ರದ ಬೈಲೂರು ಉಮಿಕಲ್ ಬೆಟ್ಟದಲ್ಲಿ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಕರಾವಳಿಯ ಸೃಷ್ಟಿಕರ್ತನೆಂದೆ ಕರೆಯಲ್ಪಡುವ ಶ್ರೀ ಪರಶುರಾಮ ಮೂರ್ತಿಯನ್ನು ಪುನರ್ ಸ್ಥಾಪಿಸಲು ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿ ರಚಿಸಲಾಗಿದೆ.

ಸಮಿತಿಯ ಮೊದಲ ಸಭೆಯು ಮಾರ್ಚ್ 25 ಸೋಮವಾರದಂದು ಉಡುಪಿಯ ಮಥುರಾ ಹೋಟೆಲಿನಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಕೆ‌. ಕೃಷ್ಣಮೂರ್ತಿ ಆಚಾರ್ಯ ಮತ್ತು ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಬಜಗೋಳಿ ಯವರ ನೇತೃತ್ವತ್ವದಲ್ಲಿ ನಡೆಯಿತು. ಸಮಿತಿಯ ಸಲಹೆಗಾರರಾದ ವಿಶ್ವಾಸ್ ವಿ. ಅಮೀನ್, ಉಪಾಧ್ಯಕ್ಶರಾದ ನಲ್ಲೂರು ಪ್ರದೀಪ್ ಶೆಟ್ಟಿ, ಬೆಳುವಾಯಿಯ ನಿತಿನ್ ಪೂಜಾರಿ, ಪ್ರಧಾನ ಕಾರ್ಯದರ್ಶಿ, ಕಾಂತಾವರದ ಪ್ರದೀಪ್ ಕುಲಾಲ್, ಜತೆ ಕಾರ್ಯದರ್ಶಿ ಬೋಳ ಸಂತೋಷ, ಹವಾಲ್ದಾರ್ ಬೆಟ್ಟು ಶಶಿಧರ ಉಪಸ್ಥಿತರಿದ್ದರು.

ಸಮಿತಿಯ ಸದಸ್ಯರಾದ ಪೆರ್ಡೂರು ನವೀನ್ ಸಾಲಿಯಾನ್, ಚೇರ್ಕಾಡಿಯ ವಿಗ್ನೇಶ್, ಕಡ್ತಲದ ಹರೀಶ್ ಪೂಜಾರಿ, ಹೆಬ್ರಿ ಚಾರದ ದಿನೇಶ್ ಕುಮಾರ್ ಮತ್ತು ಮರ್ಣೆ ರಾಜೇಶ್ ಶೆಟ್ಟಿ ಸಭೆಯಲ್ಲಿದ್ದು, ಸಮಿತಿಯ ರೂಪುರೇಷೆಗಳ ಬಗ್ಗೆ ಚರ್ಚಿಸಿದರು.

ಮುಂಬರುವ ದಿನಗಳಲ್ಲಿ ಥೀಮ್ ಪಾರ್ಕ್ ನಲ್ಲಿ ಪರಶುರಾಮನ ಪ್ರತಿಮೆಯನ್ನು ಪುನರ್ ಸ್ಥಾಪನೆ ಮಾಡುವಲ್ಲಿ ಹಾಗೂ ಈ ಬಗ್ಗೆ ಜನಜಾಗೃತಿ ಮೂಡಿಸುವಲ್ಲಿ ಸಮಿತಿಯ ಪಾತ್ರಗಳ ಬಗ್ಗೆ ಹಾಗೂ ಸಮಿತಿಯ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಸಮಿತಿಯ ಗೌರವಾಧ್ಯಕ್ಷರಾದ ಕೆ.‌ಕೃಷ್ಣಮೂರ್ತಿ ಆಚಾರ್ಯ ತಿಳಿಸಿದರು.

ಅಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ ಮಾತನಾಡಿ, ಮುಂದಿನ ದಿನಗಳು ನಿರ್ಣಾಯಕಯಕವಾಗಿದ್ದು ಸಭೆಯು ಕರಾವಳಿ ಜಿಲ್ಲೆಯ ಪ್ರತೀ ತಾಲೂಕು ಹಾಗೂ ಗ್ರಾಮಮಟ್ಟದಿಂದ ಹಿಂದೂ ಧರ್ಮ ಹಾಗೂ ಹಿಂದೂಗಳ ದೇವರು ಹಾಗೂ ವಿಷ್ಣುವಿನ ದಶಾವತಾರಗಳಲ್ಲೊಂದಾದ ಪರಶುರಾಮ ದೇವರ ಬಗೆಗೆ ನೆಡೆಯಬೇಕಾದ ಜಾಗೃತಿ ಹಾಗೂ ಸನಾತನ ಧರ್ಮದ ರಕ್ಷಣೆ ಹಾಗೂ ಅಗತ್ಯತೆ ಬಗ್ಗೆ ತಿಳಿಸಿದರು.

ಸಭೆಯಲ್ಲಿ ಸಮಿತಿಯ ಸದಸ್ಯರು ಸೂಕ್ತ ರೀತಿಯಲ್ಲಿ ಅಧಿಕಾರಿಗಳ ಜೊತೆ, ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಸರಕಾರದ ಮಟ್ಟದಲ್ಲಿ ಪರಶುರಾಮ ಮೂರ್ತಿಯನ್ನು ಪುನರ್ ಸ್ಥಾಪಿಸಲು ಕೈಗೊಳ್ಳಬೇಕಾದ ವಿಷಯಗಳ ಬಗ್ಗೆ ಚರ್ಚಿಸಿದರು.

ಪ್ರಧಾನ ಕಾರ್ಯದರ್ಶಿಯವರಾದ ಕಾಂತಾವರದ ಪ್ರದೀಪರವರು ಸಭೆಯ ಕೊನೆಯಲ್ಲಿ ವಂದನಾ ನಿರ್ಣಯ ಕೈಗೊಂಡರು.

 

LEAVE A REPLY

Please enter your comment!
Please enter your name here