
ಉಡುಪಿ: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮೂವರು ಸಾಧಕರನ್ನು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ವಿಶೇಷವಾಗಿ ಸಮ್ಮಾನಿಸಿದರು.
ದಾಸ ಸಾಹಿತ್ಯದಲ್ಲಿ ವಿಶೇಷ ಸಾಧನೆ ಮಾಡಿದ ಅನಂದ ತೀರ್ಥಾಚಾರ್ ಪಗಡಾಲ್ ಅವರಿಗೆ ಹಾಗೂ ಕೈಮುಖ್ಯಂ ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ಶಿಷ್ಯ ಸಂಪತ್ತನ್ನು ಹೊಂದಿದ ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಪರಿಣತಿ ಹೊಂದಿರುವ ಕೈಮುಖ್ಯಂ ನಾರಾಯಣ ನಂಬೂದರಿ ಅವರಿಗೆ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿ ಪದ್ಮಭೂಷಣ ಪ್ರಶಸ್ತಿ ವಿಜೇತರಾದ ಪ್ರಹ್ಲಾದ ರಾಮ ರಾವ್ ಅವರಿಗೆ ಶ್ರೀ ಪಾದರೂ ಸನ್ಮಾನಿಸಿದರು.
ಪ್ರಮುಖರಾದ ರಮೇಶ್ ಭಟ್ ಉಪಸ್ಥಿತರಿದ್ದರು.
