ಅಯೋಧ್ಯೆ: ಅಯೋಧ್ಯೆ ರಾಮಮಂದಿರದಲ್ಲಿ ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಮಂಡಲೋತ್ಸವ ದ ಮೂರನೇ ದಿನವಾಗಿದ್ದು ವೈದಿಕರಿಂದ ವಿವಿಧ ತತ್ವ ಹೋಮ ರಾಮತಾರಕ ಮಂತ್ರ ಹೋಮ ಕಲಶಾರಾಧನೆಗಳು ನಡೆದವು.
ಶ್ರೀಗಳು ವಿವಿಧ ಮಂತ್ರಗಳಿಂದ ತತ್ತ್ವ ನ್ಯಾಸಾದಿಗಳನ್ನು ನೆರವೇರಿಸಿದ ಬಳಿಕ ಶ್ರೀರಾಮದೇವರಿಗೆ ಕಲಶೋದಕ ಪ್ರೋಕ್ಷಣೆ, ಪ್ರಸನ್ನ ಪೂಜೆಗಳನ್ನು ನೆರವೇರಿಸಿದರು .
ಇವತ್ತಿನ ಧಾರ್ಮಿಕ ವಿಧಿಗಳಲ್ಲಿ ಕುಂಜಾರು ಪಾಜಕ ಕ್ಷೇತ್ರ ಮಧ್ವಮಠದ ವ್ಯವಸ್ಥಾಪಕರೂ ಅರ್ಚಕರೂ ಹಿರಿಯ ವೈದಿಕ ವಿದ್ವಾಂಸರೂ ಆಗಿರುವ ಶ್ರೀ ಮಾಧವ ಉಪಾಧ್ಯಾಯ, ಹಿರಿಯ ಜ್ಯೋತಿಷಿ ನಿಟ್ಟೆ ಪ್ರಸನ್ನಾಚಾರ್ಯರು ಭಾಗವಹಿಸಿದರು.
