ನವದೆಹಲಿ: ಒಬ್ಬ ಶ್ರೇಷ್ಠ ಧರ್ಮ ಗುರುವಿನ ಪರ್ಯಾಯ ಮಹೋತ್ಸವದಲ್ಲಿ ಉಪಸ್ಥಿತನಿರಲು ಅತ್ಯಂತ ಉತ್ಸುಕನಾಗಿದ್ದೆ. ಆದರೆ ಸಂಸತ್ ಅಧಿವೇಶನ ಹಾಗೂ ಇನ್ನಿತರೆ ಕಾರ್ಯಭಾರದ ನಿಮಿತ್ತ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲವೆಂದು ತಮ್ಮಲ್ಲಿ ಅತ್ಯಂತ ವಿಮ್ರತೆಯಿಂದ ಅರಿಕೆ ಮಾಡಿಕೊಳ್ಳುತ್ತಿದ್ದೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಪತ್ರದ ಮೂಲಕ ತಿಳಿಸಿದ್ದಾರೆ.
ಪುತ್ತಿಗೆ ಶ್ರೀಗಳು ದೇಶ ಹಾಗು ನಾಡು ಕಂಡ ಅದ್ಭುತ ಹಾಗೂ ಶ್ರೇಷ್ಠ ಸಂತರಲ್ಲಿ ಒಬ್ಬರು ಎಂಬುದನ್ನು ತಮಗೆ ತಿಳಿಸಲು ಹರ್ಷವೆನಿಸುತ್ತದೆ. ಪೀಠವನ್ನು ಅತ್ಯುನ್ನತ ಸ್ಥಾನಕ್ಕೇರಿಸುತ್ತಿರುವ ಕೀರ್ತಿ ತಮ್ಮದು. ತಮ್ಮಂತಹ ಹೃತ್ತೂರ್ವಕ ಅಭಿನಂದನೆಗಳು. ಈ ಕಾರ್ಯಕ್ರಮ ಯಶಸ್ವಿಯಾಗಿ ನೆರೆವೇರಲೆಂದು ಹಾಗೂ ಇದರ ಉದ್ದೇಶ ತಮ್ಮ ಹಾಗೂ ಶ್ರೀಕೃಷ್ಣನ ಆಶೀರ್ವಾದದಿಂದ ಸಕಲರೂ ಸಾರ್ಥಕತೆ ಪಡೆಯಲೆಂಬುದೇ ಆಗಿದೆ.
ಶ್ರೀ ಕೃಷ್ಣ ಹಾಗೂ ಶ್ರೀ ಕೃಷ್ಣ ಗೀತೆಯ ಅತ್ಯಂತ ಅಂತರಂಗ ಭಕ್ತರಾದ ತಾವುಗಳು ವೇದಾಂತ ಪರಂಪರೆಗೆ ನೀಡಿರುವ ಕೊಡುಗೆ ಅಪಾರ. ಸನ್ಯಾಸಿಯಾಗಿ ಮಠಕ್ಕೆ ಸೀಮಿತವಾಗದೇ ಅಧ್ಯಾತ್ಮದ ಬೋಧನೆಯ ಜೊತೆಗೆ ಸಾಮಾಜಿಕ ಕಾರ್ಯ ಗೋರಕ್ಷಣೆ, ಕೈಂಕರ್ಯಗಳಲ್ಲಿ ತೊಡಗಿ, ನರ ನಾರಾಯಣರ ಸೇವೆ ಮಾಡುತ್ತಾ ಸಾಮಾಜಿಕ ಸಮಾನತೆ, ಧಾರ್ಮಿಕ ಔನ್ನತ್ಯ, ರಾಷ್ಟ್ರ ಪುನರ್ ನಿರ್ಮಾಣಕ್ಕಾಗಿ ದುಡಿಯುತ್ತಿರುವ ಯತಿವರ್ಯರಿಗೆ ಚತುರ್ಥ ಬಾರಿಗೆ ಸರ್ವಜ್ಞ ಪೀಠವನ್ನು ಆರೋಹಿಸುವ ಸಂಭ್ರಮ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
