
ಉಡುಪಿ: ಉಡುಪಿ ಪರ್ಯಾಯ ಹಿನ್ನೆಲೆಯಲ್ಲಿ ನಗರದಲ್ಲಿ ಸ್ವಚ್ಛತೆ, ರಸ್ತೆದುರಸ್ತಿಗೆ ಹಾಗೂ ಪರ್ಯಾಯ ಸಂದರ್ಭದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ವಿಶೇಷ ಆದ್ಯತೆ ನೀಡಲಾಗಿದೆ.
ನಗರಸಭೆಯ ಪೌರಾಯುಕ್ತ ರಾಯಪ್ಪ ಈ ಬಗ್ಗೆ ಮಾಹಿತಿ ನೀಡಿದ್ದು, ಪರ್ಯಾಯ ಹಿನ್ನೆಲೆಯಲ್ಲಿ ಜನವರಿ 16ರಿಂದಲೇ ನಗರದಲ್ಲಿ ಜನಸಂದಣಿ ಹೆಚ್ಚಾಗಲಿದೆ. ಹೀಗಾಗಿ ಸ್ವಚ್ಛತೆಗಾಗಿ 100 ಮಂದಿ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಸುಮಾರು 15 ಕಡೆಗಳಲ್ಲಿ ಸಾರ್ವಜನಿಕರಿಗೆ ಶೌಚಾಲಯದ ವ್ಯವಸ್ಥೆಯನ್ನು ಮಾಡಲಾಗಿದೆ. ಸುಮಾರು 20 ಮಂದಿ ಸೂಪರ್ ವೈಸರ್ ನೇಮಕ ಮಾಡಲಾಗಿದ್ದು, ಅವರಿಗೆ ನಿರ್ದೇಶನ ನೀಡಿ ಅವರ ಮೂಲಕ ಕೆಲಸ ನಿರ್ವಹಿಸಲಾಗುತ್ತಿದೆ. ಎಲ್ಲೆಲ್ಲಿ ಶೌಚಾಲಯ ಬೇಕೆಂದು ಮನವಿ ಸಲ್ಲಿಸಿದ್ದಾರೆ ಅಲ್ಲಿ ಶೌಚಾಲಯ ತೆರಯಲಾಗುತ್ತಿದೆ.
ನಗರದ ವಿವಿಧ ಭಾಗಗಳಲ್ಲಿ ರಸ್ತೆಗಳ ದುರಸ್ತಿ ನಡೆಯುತ್ತಿದೆ. ಚಿಟ್ಪಾಡಿ, ಬೀಡಿನಗುಡ್ಡೆ, ಬಡಗುಪೇಟೆ ಸಹಿತ ನಗರಪ್ರದೇಶ ವ್ಯಾಪ್ತಿಗಳಲ್ಲಿ ಸಂಸ್ಖೃತ ಕಾಲೇಜು ಭಾಗದಲ್ಲಿ ದುರಸ್ತಿಗೊಳಿಸಲಾಗಿದೆ. ಬ್ರಹ್ಮಗಿರಿ ಸಹಿತ ಕೆಲವು ಬಾಗದಲ್ಲಿ ದುರಸ್ತಿ ಕಾರ್ಯ ನಡೆಯಲಿದೆ. ಅಂಬಾಗಿಲು -ಕಲ್ಸಂಕ ಸರ್ಕಲ್ ವರೆಗೆ, ಕಿನ್ನಿಮೂಲ್ಕಿಯಿಂದ ತ್ರಿವೇಣಿ ಸರ್ಕಲ್ ವರೆಗೆ ವಿವಿದಡೆ ಡಿವೈಡರ್ ಗೆ ಪೈಂಟಿಂಗ್, ರಸ್ತೆಗಳ ಬದಿಗೆ ಬಿಳಿ ಪೈಂಟಿಂಗ್ ಜತೆಗೆ ರಿಫ್ಲೆಕ್ಟರ್ ಹಾಕಲಾಗುತ್ತಿದೆ. ಸೋಮವಾರದೊಳಗೆ ಈ ಕಾರ್ಯಗಳು ಮುಗಿಯುತ್ತದೆ. ಶಾಸಕರು, ಎಂಜಿನಿಯರ್ ಗಳ ಸಹಕಾರದಿಂದ ರಾತ್ರಿ ಹಗಲೆನ್ನದೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಕುಡಿಯುವ ನೀರಿನ ಪೂರೈಕೆ
ಕುಡಿಯುವ ನೀರಿನ ಪೂರೈಕೆಯ ಬಗ್ಗೆ ಈ ಬಾರಿ ವಿಶೇಷವಾಗಿ ಮಾಡಲಾಗುತ್ತಿದೆ. ಹಲವು ಭಾಗದಲ್ಲಿ ಕಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ ಅದಕ್ಕಾಗಿ ಸಿಬಂದಿ ನೇಮಕ ಮಾಡಲಾಗಿದೆ. ಅಲ್ಲಲ್ಲಿ ಶಾಮಿಯಾನ ಹಾಕಿ ನೀರಿನ ವ್ಯವಸ್ಥೆ ಮಾಡಲಾಗುತ್ತೆ ಈಗಾಗಲೇ ಟೆಂಡರ್ ಆಗಿದೆ ಎಂದು ಪೌರಾಯುಕ್ತ ರಾಯಪ್ಪ ತಿಳಿಸಿದ್ದಾರೆ.
