
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಆಡುವ
ಬೆಂಗಳೂರು ರಾಯಲ್ ಚಾಲೆಂಜರ್ಸ್‌ನ ಅಧಿಕೃತ ಐಸ್‌ಕ್ರೀಮ್ ಪಾಲುದಾರನಾಗಿ ಕರಾವಳಿಯ ಹಾಂಗ್ಯೊ ಐಸ್‌ಕ್ರೀಂ ಸೇರಿಕೊಂಡಿದೆ.
ಬೆಂಗಳೂರಿನಲ್ಲಿ ಈ ಕುರಿತ ಒಡಂಬಡಿಕೆಗೆ ಆರ್‌ಸಿಬಿ ಮತ್ತು ಹಾಂಗ್ಯೋದ ಮುಖ್ಯಸ್ಥರು ಸಹಿ ಹಾಕಿದ್ದು, ಈ ಮೂಲಕ ಹಾಂಗ್ಯೊ ಐಸ್‌ಕ್ರೀಂಗಳು ಐಪಿಎಲ್ ಟೂರ್ನಿಯಲ್ಲಿ ಆರ್ ಸಿಬಿ ಪಂದ್ಯದ ವೇಳೆ ಸಂಭ್ರಮದ ವಾತಾವರಣವನ್ನು ಸೃಷ್ಟಿಸಲಿದೆ.
ಆರ್‌ಸಿಬಿ ಜತೆ ರೋಮಾಂಚಕ ಪಯಣ ಆರಂಭಿಸುತ್ತಿದ್ದು, ಇದು ಉದ್ಯಮದಲ್ಲಿ ಹೊಸ ಭಾಷ್ಯ ಬರೆಯಲಿದೆ. ಕ್ರಿಕೆಟ್ ಸ್ಫೋಟಕ ಆಟದೊಂದಿಗೆ ಹಾಂಗ್ಯೋ ಐಸ್ ಕ್ರೀಮ್‌ನ ಆಹ್ಲಾದಕರ ಐಸ್‌ಕ್ರೀಂಗಳು ಸಂಭ್ರಮದ ವಾತಾವರಣಕ್ಕೆ ಕಾರಣವಾಗಲಿದೆ ಎಂದು ಹಾಂಗ್ಯೋ ಐಸ್‌ಕ್ರೀಮ್ಸ್ ಕಂಪೆನಿ ಪ್ರಕಟನೆ ಹೇಳಿದೆ.
2002ರಲ್ಲಿ ಸ್ಥಾಪನೆಯಾದ ಈ ಹಾಂಗ್ಯೋ ಐಸ್‌ಕ್ರೀಮ್ಸ್ ಕಂಪನಿ 7 ರಾಜ್ಯಗಳನ್ನು ವ್ಯಾಪಿಸಿದೆ. ಸದ್ಯ ಈ ಬ್ರಾಂಡ್ ಅಗ್ರ ಸ್ಥಾನದಲ್ಲಿದ್ದು, ದಿನಕ್ಕೆ 1.2 ಲಕ್ಷ ಲೀ.ಗಳಷ್ಟು ಉತ್ಪಾದನ ಸಾಮರ್ಥ್ಯವನ್ನು ಹೊಂದಿದೆ. 30 ಸಾವಿರ ರಿಟೇಲ್ ಶಾಪ್‌ಗಳು, 330 ಚಾನೆಲ್ ಪಾಲುದಾರರು ಮತ್ತು ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡಿದೆ.
