Home ಕರ್ನಾಟಕ ಕರಾವಳಿ ಬಿಜೆಪಿ ಹಿರಿಯ ಮುಖಂಡ ಎಂ. ಸೋಮಶೇಖರ ಭಟ್ ನಿಧನ

ಬಿಜೆಪಿ ಹಿರಿಯ ಮುಖಂಡ ಎಂ. ಸೋಮಶೇಖರ ಭಟ್ ನಿಧನ

0
ಬಿಜೆಪಿ ಹಿರಿಯ ಮುಖಂಡ ಎಂ. ಸೋಮಶೇಖರ ಭಟ್ ನಿಧನ

ಉಡುಪಿ: ಬಿಜೆಪಿಯ ಹಿರಿಯ ಮುಖಂಡ, ಆರ್ ಎಸ್ ಎಸ್ ನ ಹಿರಿಯ ನೇತಾರ ಎಂ. ಸೋಮಶೇಖರ ಭಟ್ (90)ಅವರು ಭಾನುವಾರ ವಯೋಸಹಜ ಅನಾರೋಗ್ಯದಿಂದ ಉಡುಪಿಯ ತನ್ನ ನಿವಾಸದಲ್ಲಿ ನಿಧನ‌ ಹೊಂದಿದ್ದಾರೆ. ಮೃತರು ಪತ್ನಿ ಹಾಗೂ ಓರ್ವ ಪುತ್ರಿ ಇಬ್ಬರು ಪುತ್ರರರನ್ನು ಅಗಲಿದ್ದಾರೆ.

ಸೋಮಶೇಖರ್ ಭಟ್ ಅವರು‌ ಜನಸಂಘದ ಕಾಲದಿಂದ ಪಕ್ಷದಲ್ಲಿ ತೊಡಗಿಸಿ ಕೊಂಡಿದ್ದರು. ಅವರು ಎರಡು ಬಾರಿ ಉಡುಪಿ ನಗರ ಸಭೆಯ ಸದಸ್ಯರಾಗಿದ್ದರು ಮತ್ತು ಒಮ್ಮೆ ನಗರಸಭೆಯ ಅಧ್ಯಕ್ಷರಾಗಿದ್ದರು. ಉಡುಪಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. 1965ರಲ್ಲಿ ವಿಶ್ವ ಹಿಂದೂ ಪರಿಷತ್ ಮೊದಲ ಪ್ರಾಂತ ಸಮ್ಮೇಳನದ ಸಂಘಟಕರಲ್ಲಿ ಓರ್ವರಾಗಿದ್ದರು. ಮತ್ತು ಜನಸಂಘದ ಸ್ಥಾಪಕ ಸದಸ್ಯರಾಗಿದ್ದರು‌.

 

LEAVE A REPLY

Please enter your comment!
Please enter your name here