
ಬಜಪೆ: ತುಳುನಾಡಿನ ಸಪ್ತ ದೇವಿ ಸನ್ನಿಧಿಗಳಲ್ಲಿ ಒಂದಾಗಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಮಾ.೫ ರಂದು ಲೋಕಕಲ್ಯಾಣಾರ್ಥವಾಗಿ ಹಾಗೂ ಸಾನಿಧ್ಯ ವೃದ್ದಿಗಾಗಿ ಶತಚಂಡಿಕಾಯಾಗ ಪೂಜೆ ನಡೆದಿದ್ದು, ಧಾರ್ಮಿಕ ಕಾರ್ಯಗಳು ವಿಧಿವಿಧಾನದಿಂದ ಸಂಪನ್ನಗೊಂಡಿವೆ. ವಿಶೇಷವೆಂದರೆ ಒಂದು ಶತಮಾನದ ಬಳಿಕ ನಡೆಯುತ್ತಿರುವ ಈ ಶತಚಂಡಿಕಾಯಾಗವನ್ನು ಸಹಸ್ರಾರು ಭಕ್ತರು ಕಣ್ತುಂಬಿಕೊಂಡು ಧನ್ಯರಾಗಿದ್ದಾರೆ.
ವೇ.ಮೂ ಪೊಳಲಿ ಶ್ರೀಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಕ್ಷೇತ್ರದ ಅರ್ಚಕರಾದ ಮಾಧವಭಟ್, ನಾರಾಯಣ ಭಟ್, ಪರಮೇಶ್ವರ ಭಟ್ ಮತ್ತು ರಾಮ್ ಭಟ್ ಪೌರೋಹಿತ್ಯದಲ್ಲಿ ವಿವಿಧ ವೈದಿಕ ವಿಧಿ ವಿಧಾನಗಳು ನಡೆದವು.
ಮಾ. ರಂದು ಸೇವಾ ರೂಪದ ರಂಗಪೂಜೆ ನಡೆಯಲಿದ್ದು, ರಾತ್ರಿ ದೇವರ ಬಲಿ ಉತ್ಸವ, ಬೆಳ್ಳಿರಥೋತ್ಸವ, ಚಂದ್ರಮಂಡಲ ರಥ, ಸಣ್ಣ ರಥೋತ್ಸವ, ಪಲ್ಲಕ್ಕಿ ಉತ್ಸವ ನಡೆಯಲಿದೆ.
