ಕಾಪು: ಇಲ್ಲಿನ ಹೊಸ ಮಾರಿಗುಡಿಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಕಲ ವಿಧಿ ವಿಧಾನಗಳೊಂದಿಗೆ ಪೂರ್ಣಗೊಂಡಿದ್ದು, ಅಮ್ಮನ ಸನ್ನಿಧಾನದಲ್ಲಿ ಮುಂದಿನ 48 ದಿನಗಳ ಕಾಲ ನಡೆಯಲಿರುವ ನಿತ್ಯೋತ್ಸವಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಹೊಸ ಮಾರಿಗುಡಿ ದೇವಸ್ಥಾನದ ಪ್ರಧಾನ ತಂತ್ರಿ ಕೊರಂಗ್ರಪಾಡಿ ಕೆ.ಪಿ. ಕುಮಾರ ಗುರು ತಂತ್ರಿಗಳ ನೇತೃತ್ವದಲ್ಲಿ, ಅರ್ಚಕ ವೇ| ಮೂ| ಕಲ್ಯ ಶ್ರೀನಿವಾಸ ತಂತ್ರಿಯವರ ಸಹಯೋಗದೊಂದಿಗೆ ನಿತ್ಯೋತ್ಸವದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮತ್ತು ಬೀನಾ ವಿ. ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ ಮತ್ತು ಸುಗುಣಾ ಆರ್. ಶೆಟ್ಟಿ, ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಮನೋಹರ್ ಎಸ್. ಶೆಟ್ಟಿ, ಮಾಧವ ಆರ್. ಪಾಲನ್, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಉದಯ ಸುಂದರ್ ಶೆಟ್ಟಿ, ಯೋಗೀಶ್ ಶೆಟ್ಟಿ ಬಾಲಾಜಿ, ಭಗವಾನ್‌ದಾಸ್ ಶೆಟ್ಟಿಗಾರ್, ದಾನಿ ಪ್ರಭಾಕರ ಶೆಟ್ಟಿ ಮಂಡಗದ್ದೆ, ಟ್ರಸ್ಟಿಗಳಾದ ಶೇಖರ್ ಸಾಲ್ಯಾನ್, ಮನೋಹರ ರಾವ್, ರವೀಂದ್ರ ಮಲ್ಲಾರು, ಜಯಲಕ್ಷ್ಮೀ ಎಸ್. ಶೆಟ್ಟಿ, ಚರಿತಾ ದೇವಾಡಿಗ, ಪ್ರಮುಖರಾದ ಹರೀಶ್ ಶೆಟ್ಟಿ ಎರ್ಮಾಳು, ರತ್ನಾಕರ ಶೆಟ್ಟಿ ಕೊಲ್ಯ, ಶಿಲ್ಪಾ ಜಿ. ಸುವರ್ಣ, ರತ್ನಾಕರ ಹೆಗ್ಡೆ ಕಲೀಲಬೀಡು ಮೊದಲಾದವರು ಉಪಸ್ಥಿತರಿದ್ದರು.
ಏನಿದು ನಿತ್ಯೋತ್ಸವ?
ಅಯೋಧ್ಯೆ ಶ್ರೀ ರಾಮ ಮಂದಿರಲ್ಲಿ ನಡೆದ ಮಂಡಲೋತ್ಸವದ ಮಾದರಿಯಲ್ಲಿ ಹೊಸ ಮಾರಿಗುಡಿಯಲ್ಲಿ ಬ್ರಹ್ಮಕಲಶೋತ್ಸವದಿಂದ ಮುಂದಿನ ದೃಢ ಕಲಶದವರೆಗಿನ 48 ದಿನಗಳ ಕಾಲ ಅಂದರೆ ಏ. 18ರವರೆಗೆ ನಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ. ಪ್ರತೀದಿನ ಬೆಳಿಗ್ಗೆ 8.00ರಿಂದ ಸಂಜೆ 7.00 ಗಂಟೆಯವರೆಗೆ ಭಕ್ತರ ದರ್ಶನಕ್ಕಾಗಿ ದೇವಸ್ಥಾನವನ್ನು ತೆರೆದಿಡಲಾಗುವುದು. ನಿತ್ಯೋತ್ಸವ ಸಂದರ್ಭ ವಿವಿಧ ಸಮಿತಿಗಳ ಪ್ರಮುಖರಿಗೆ ಸೇವಾ ರೂಪದ ಚಂಡಿಕಾಹೋಮ, ಮಂಗಳಾರತಿ ಸಹಿತ ಮಧ್ಯಾಹ್ನ ಸಂತರ್ಪಣೆ ಸೇವೆ ನೀಡಲು ಅವಕಾಶವಿದೆ. ಸೇವಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬಹುದು.
ಮಾ. 25 ಮತ್ತು 26ರಂದು ಕಾಲಾವಧಿ ಸುಗ್ಗಿ ಮಾರಿಪೂಜೆ ನಡೆಯಲಿದ್ದು ದೇಶ-ವಿದೇಶದ ಭಕ್ತಾದಿಗಳು ಅಮ್ಮನ ಸನ್ನಿಧಾನಕ್ಕೆ ಬಂದು ದರುಶನ ಪಡೆದು ಪ್ರಸಾದ ಸ್ವೀಕರಿಸುತ್ತಾರೆ.
