
ಉಡುಪಿ: ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಪರ್ಯಾಯೋತ್ಸವದ ಹಿನ್ನೆಲೆಯಲ್ಲಿ ಏಳನೇ ದಿನದ ಹೊರಕಾಣಿಕೆ ಸಮರ್ಪಣೆ ಸೋಮವಾರ ಅದ್ದೂರಿಯಾಗಿ ನಡೆಯಿತು.
ಸೋಮವಾರದ ಹೊರೆಕಾಣಿಕೆ ಮೆರವಣಿಗೆಗೆ ಸ್ವತಃ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ಶ್ರೀಗಳು ಗಣ್ಯರ ಉಪಸ್ಥಿತಿಯಲ್ಲಿ ಚಾಲನೆ ನೀಡಿದರು.
ಮೆರವಣಿಗೆಯು ಜೋಡುಕಟ್ಟೆಯಿಂದ ಹಳೆ ಡಯಾನ, ಕೆಎಂ ಮಾರ್ಗ, ತ್ರಿವೇಣಿ ಸರ್ಕಲ್, ಸಂಸ್ಕೃತ ಕಾಲೇಜು ಮೂಲಕ ಮುಖ್ಯ ರಸ್ತೆಯಲ್ಲಿ ಆಗಮಿಸಿ ರಥಬೀದಿಯ ಮೂಲಕ ಪುತ್ತಿಗೆ ಮಠದತ್ತ ಸಾಗಿ ಬಂತು. ಮೆರವಣಿಗೆಯಲ್ಲಿ ಹಲವು ಕಲಾ ಪ್ರಕಾರಗಳು ಮತ್ತಷ್ಟು ಮೆರುಗು ನೀಡಿತು. ತಟ್ಟಿರಾಯ, ಚೆಂಡೆ ಬಳಗ, ಹಲವು ನೃತ್ಯಗಳು, ಹಲವು ಭಜನಾ ತಂಡಗಳು ಮೆರವಣಿಗೆಯಲ್ಲಿತ್ತು.
ಮಠದ ದಿವಾನರಾದ ಪ್ರಸನ್ನ ಆಚಾರ್ಯ, ನಾಗರಾಜ ಆಚಾರ್ಯ, ಹೊರಕಾಣಿಕೆ ಸಮಿತಿ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಕೆ. ರಘುಪತಿ ಭಟ್, ರಂಜನ್ ಕಲ್ಕೂರ್, ಪ್ರಮುಖರಾದ ರಮೇಶ್ ಭಟ್, ಮಂಜುನಾಥ್ ಉಪಾಧ್ಯ, ರವೀಂದ್ರ ಆಚಾರ್ಯ, ರಾಮಚಂದ್ರ ಉಪಾಧ್ಯಾಯ, ಶ್ರೀನಿವಾಸ ಉಪಾಧ್ಯಾಯ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ, ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸಂದೀಪ್ ಮಂಜ, ರಾಮಕ್ಷತ್ರೀಯ ಸಂಘಟನೆಯ ಕೆ.ಟಿ. ನಾಯಕ್, ಪದ್ಮಶಾಲಿ ಸಮುದಾಯದ ರತ್ನಾಕರ ಇಂದ್ರಾಳಿ, ಕುಲಾಲ್ ಸಂಘದ ಕೃಷ್ಣಪ್ಪ ಕುಲಾಲ್, ದೈವಜ್ಞ ಬ್ರಾಹ್ಮಣ ಸಂಘದ ಸುಬ್ರಹ್ಮಣ್ಯ ಶೇಟ್, ಹಾಲುಮತ ಸಮಾಜದ ವೀರೇಶ್, ಗುಜರಾತಿ ಸಮಾಜದ ಅಮೃತ್‌ಬಾಯಿ ಪಾಟೇಲ್, ಸವಿತಾ ಸಮಾಜದ ವಿಶ್ವನಾಥ ಭಂಡಾರಿ, ಆರ್‌ಎಸ್‌ಬಿ ಸಮಾಜದ ಶ್ರೀಶ ನಾಯಕ್ ಪೆರ್ಣಂಕಿಲ, ಜೋಗಿ ಸಮಾಜದ ಸುರೇಂದ್ರ ಜೋಗಿ, ಹವ್ಯಾಕ ಸಮಾಜದ ಸದಾಶಿವ ರಾವ್, ವಿಶ್ವಕರ್ಮ ಸಮಾಜದ ವೆಂಕಟೇಶ ಆಚಾರ್ಯ ಉಪಸ್ಥಿತರಿದ್ದರು.
