
ಉಡುಪಿ: ಕೃಷ್ಣನೂರು ಉಡುಪಿ ಪರ್ಯಾಯ ಸಂಭ್ರಮಕ್ಕೆ ಅಣಿಯಾಗುತ್ತಿದೆ. ಉಡುಪಿಗೆ ಉಡುಪಿಯೇ ಶೃಂಗಾರಗೊಂಡು ಕಂಗೊಳಿಸುತ್ತಿದೆ. ಉಡುಪಿ ನಗರದ ಅಲಂಕಾರ, ಸ್ವಾಗತ ಗೋಪುರಗಳು ಕಣ್ಮನ ಸೆಳೆಯುತ್ತಿದೆ. ನಗರದ ವಿವಿಧ ಭಾಗಗಳಲ್ಲಿ ಸಾಂಪ್ರದಾಯಿಕ ಸ್ವಾಗತ ಕಮಾನುಗಳನ್ನು ಸಿದ್ದಪಡಿಸಲಾಗಿದೆ.
ಶ್ರೀ ಪುತ್ತಿಗೆ ಮಠದ ಗುರು ಪರಂಪರೆ ನೆನಪಿಗಾಗಿ ಉಡುಪಿಯ ಐಡಿಯಲ್ ಸರ್ಕಲ್ ನಿಂದ ರಥಬೀದಿಯ ವರೆಗೆ ಮೂವತ್ತೊಂದು ತೀರ್ಥ ಮಂಟಪ ನಿರ್ಮಿಸಲಾಗಿದ್ದು, ಅತ್ಯಂತ ಸುಂದರ ದೃಶ್ಯಗಳನ್ನು ಕಾಣಬಹುದಾಗಿದೆ.
