Home ಕರಾವಳಿ ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌ ಏಮ್ಸ್ ಗೆ ದಾಖಲು

ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌ ಏಮ್ಸ್ ಗೆ ದಾಖಲು

ಹೊಸದಿಲ್ಲಿ: ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರನ್ನು ರವಿವಾರ (ಮಾ.09) ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಗದೀಪ್‌ ಧನಕರ್‌ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿ ಹೇಳಿದೆ.

73 ವರ್ಷ ಪ್ರಾಯದ ಜಗದೀಪ್‌ ಧನಕರ್‌ ಅವರನ್ನು ಮಧ್ಯರಾತ್ರಿ 2 ಗಂಟೆಯ ಸುಮಾರಿಗೆ ಆಸ್ಪತ್ರೆಗೆ ಸೇರಿಸಲಾಯಿತು. ಸದ್ಯ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪಿಟಿಐ ವರದಿ ಹೇಳಿದೆ.

ಧನಕರ್‌ ಅವರಿಗೆ ಏಮ್ಸ್‌ನ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ರಾಜೀವ್ ನಾರಂಗ್ ಅವರ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ತಂಡವು ಅವರ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.

 

 
Previous article‘ಛಾವಾ’ ಚಿತ್ರದ ಚಿನ್ನದ ಬೇಟೆ: ಆಸಿರ್‌ಗಢ ಕೋಟೆಯಲ್ಲಿ ನೆಲ ಅಗೆಯುತ್ತಿರುವ ಜನ
Next articleNCC ವಿಶೇಷ ಪ್ರವೇಶ ಯೋಜನೆ ಅರ್ಜಿ ಆಹ್ವಾನ- ಭಾರತೀಯ ಸೇನೆ ಸೇರಲು ಸದವಕಾಶ