
ಉಡುಪಿ: ಇಲ್ಲಿನ ಶೋ ರೂಂ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮೂಡುಬೆಳ್ಳೆಯ ಯುವಕ ಫೆಬ್ರವರಿ 27 ರಿಂದ ನಾಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ.
ಫೆಬ್ರವರಿ 27 ರಂದು ಕೆಲಸಕ್ಕಾಗಿ ಮನೆಯಿಂದ ಹೊರಗೆ ಹೋಗಿದ್ದ ಯುವಕ ಜಯಪ್ರಕಾಶ್ (26) ಆರು ದಿನ ಕಳೆದರೂ ಮನೆಗೆ ಹಿಂತಿರುಗಿಲ್ಲ. ಈ ಬಗ್ಗೆ ಆತನ ಕುಟುಂಬವು ಉಡುಪಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
