Home ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ 143 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಗೆ ಬಹುಮತ: ಆರ್. ಅಶೋಕ್‌

ಲೋಕಸಭಾ ಚುನಾವಣೆಯಲ್ಲಿ 143 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಗೆ ಬಹುಮತ: ಆರ್. ಅಶೋಕ್‌

ಬೆಂಗಳೂರು: ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಕಾಂಗ್ರೆಸ್‌ ಪಕ್ಷವನ್ನು ರಾಜ್ಯದ ಜನತೆ ಕಸದ ಬುಟ್ಟಿಗೆ ಹಾಕಿದ್ದಾರೆ. ಇದಕ್ಕಾಗಿ ಜನರಿಗೆ ನಾವು ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ 143 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಬಹುಮತ ಸಾಧಿಸಿದೆ. ನಾವು ಗ್ಯಾರಂಟಿ ಕೊಟ್ಟ ತಕ್ಷಣ ಜನ ನಮಗೆ ಮತ ಹಾಕಿ ಬಿಡ್ತಾರೆ. ನಾವು ಡಬಲ್‌ ಡಿಜಿಟ್‌ಗೆ ಹೋಗ್ತೀವಿ. ಬಿಜೆಪಿ ಗೆಲ್ಲಲ್ಲ, ಜೆಡಿಎಸ್‌ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಜೆಡಿಎಸ್‌ ಒಂದೂ ಸೀಟ್‌ ಗೆಲ್ಲಲ್ಲ ಅಂತ ಹೇಳ್ತಿದ್ದ ಕಾಂಗ್ರೆಸ್‌ನವರಿಗೆ ಈಗ ಒಂದು ರೀತಿಯ ನಡುಕ ಶುರುವಾಗಿದೆ. ಕರ್ನಾಟಕದ ಜನ ಲೋಕಸಭಾ ಚುನಾವಣೆಯ ಮೂಲಕ ಅವರಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ಹೇಳಿದ್ದಾರೆ.

 
Previous articleದಕ್ಷಿಣ ಕನ್ನಡ, ಉಡುಪಿ ಕೊಡಗಿನಲ್ಲಿ ರೆಡ್‌ ಅಲರ್ಟ್‌ ಘೋಷಣೆ : ಹವಾಮಾನ ಇಲಾಖೆ ಎಚ್ಚರಿಕೆ
Next articleಹಪ್ಪಳವನ್ನು ಅತಿಯಾಗಿ ಸೇವಿಸುವುದು ಕೂಡ ಅಪಾಯಕಾರಿ..!